ಕಾರ್ಖಾನೆಯ ಕಲುಷಿತ ನೀರು ಸೇವಿಸಿ ಕುರಿಗಳು ಮೃತ್ಯು ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

Update: 2019-11-13 18:41 GMT

ಮಂಡ್ಯ, ನ.13: ಮದ್ದೂರು ಬಳಿ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬಾಲಾಜಿ ಮಾಲ್ಟ್ ಪ್ರವೈಟ್ ಲಿಮಿಡೆಟ್ ಪೇಪರ್ ಕಾರ್ಖಾನೆಯಿಂದ ಬಂದ ಕಲುಷಿತ ನೀರನ್ನು ಕುಡಿದು 12 ಕುರಿಗಳು ಮೃತಪಟ್ಟು, 8 ಕುರಿಗಳು ಅಸ್ವಸ್ಥಗೊಂಡಿವೆ ಎಂದು ಆರೋಪಿಸಿ ರುದ್ರಾಕ್ಷಿಪುರ ಗ್ರಾಮದ ನಿವಾಸಿಗಳು ಕಾರ್ಖಾನೆಯ ಆವರಣದಲ್ಲಿ ಸತ್ತ ಕುರಿಗಳನ್ನು ಇಟ್ಟು ಬುಧವಾರ ಪ್ರತಿಭಟಿಸಿದರು.

ಮಂಗಳವಾರ ಸಂಜೆ ರುದ್ರಾಕ್ಷಿಪುರ ಗ್ರಾಮದ ಚಿಕ್ಕಣ್ಣ ಎಂಬ ರೈತ ಕುರಿ ಮಂದೆಯನ್ನು ಮೇಯಲು ಬಿಟಿದ್ದರು. ಈ ಸಂದರ್ಭದಲ್ಲಿ ಕುರಿಗಳು ಕಾರ್ಖಾನೆಯ ಕಲುಷಿತ ನೀರು ಕುಡಿದು 12 ಕುರಿಗಳು ಮೃತಪಟ್ಟಿವೆ ಮತ್ತು 6 ಕುರಿಗಳು ಅಸ್ವಸ್ಥಗೊಂಡಿದೆ. ಇದರಿಂದ 2 ಲಕ್ಷ ನಷ್ಟವಾಗಿದೆ. ಇದರ ನಷ್ಟದ ಹಣವನ್ನು ಕಾರ್ಖಾನೆಯ ಆಡಳಿತ ಮಂಡಳಿ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಯಿಂದ ಹೊರ ಬರುತ್ತಿರುವ ಧೂಳು ರುದ್ರಾಕ್ಷಿಪುರ ಗ್ರಾಮದ ಹಲವಾರು ಮನೆಗಳ ಮೇಲೆ  ಬಿದ್ದು ಜನರ ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಬೆಳೆಗಳು ಹಾಳಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಕಾರ್ಖಾನೆಯ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜವನಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನ ಸ್ಥಳಕ್ಕೆ ಕಾರ್ಖಾನೆಯ ಆಡಳಿತ ಮಂಡಳಿಯ ಅವರು ಆಗಮಿಸಿ ಸತ್ತಿರುವ ಕುರಿಗಳಿಗೆ ಸೂಕ್ತ ಪರಿಹಾರ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News