ಭಾರತದ 2019ರ ಅಂದಾಜು ಜಿಡಿಪಿಯನ್ನು ಶೇ 5.6ಕ್ಕಿಳಿಸಿದ 'ಮೂಡೀಸ್'

Update: 2019-11-14 09:11 GMT

ಹೊಸದಿಲ್ಲಿ, ನ.14: ಜಾಗತಿಕ ರೇಟಿಂಗ್ ಏಜನ್ಸಿ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಗುರುವಾರದಂದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಅಂದಾಜು ಜಿಡಿಪಿ ಪ್ರಮಾಣವನ್ನು ಶೇ 5.8ರಿಂದ ಶೇ 5.6ಕ್ಕೆ ಇಳಿಸಿದೆ.

ಈ ಹಿಂದೆ ನಿರೀಕ್ಷಿಸಿದಕ್ಕಿಂತಲೂ  ಆರ್ಥಿಕ ನಿಧಾನಗತಿ ಮುಂದುವರಿದಿರುವುದರಿಂದ ಅಂದಾಜು ಜಿಡಿಪಿಯನ್ನು ಇಳಿಸಲಾಗಿದೆ ಎಂದು ಮೂಡೀಸ್ ತಿಳಿಸಿದೆ.

'ಕಳೆದ ವರ್ಷದ ಮೂಡೀಸ್ ಜಿಡಿಪಿ ಅಂದಾಜು ಶೇ 7.4 ಆಗಿದ್ದರೆ ಈ ವರ್ಷ ಶೇ  5.6  ಆಗಿದೆ' ಎಂದು ಮೂಡೀಸ್ ತಿಳಿಸಿದೆ. "ಭಾರತದ ಅಭಿವೃದ್ಧಿ ಪ್ರಮಾಣ 2018ರ ಮಧ್ಯಭಾಗದಿಂದ ಕುಸಿಯುತ್ತಿದೆ. ನೈಜ ಜಿಡಿಪಿ ಪ್ರಗತಿ ಶೇ 8ರಿಂದ ಶೇ 5ಕ್ಕೆ 2019ರ ಎರಡನೇ ತ್ರೈಮಾಸಿಕದಲ್ಲಿ  ಕುಸಿದಿದ್ದು ನಿರುದ್ಯೋಗ ಪ್ರಮಾಣವೂ ಏರಿಕೆಯಾಗಿದ,'' ಎಂದು  ಮೂಡೀಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News