13 ಅನರ್ಹ ಶಾಸಕರಿಗೆ ಟಿಕೆಟ್ ಘೋಷಿಸಿದ ಬಿಜೆಪಿ

Update: 2019-11-14 12:05 GMT

ಬೆಂಗಳೂರು, ನ. 14: ಅನರ್ಹ ಶಾಸಕರು ಪಕ್ಷ ಸೇರ್ಪಡೆ ಬೆನ್ನಲ್ಲೆ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಶಿವಾಜಿನಗರ ಕ್ಷೇತ್ರಗಳನ್ನು ಹೊರತುಪಡಿಸಿ 13 ಕ್ಷೇತ್ರಗಳಿಗೆ ಅನರ್ಹರಿಗೆ ಬಿಜೆಪಿ ಅಧಿಕೃತವಾಗಿ ಟಿಕೆಟ್ ಘೋಷಿಸಿದೆ.

ಅಥಣಿ-ಮಹೇಶ್ ಕುಮಟಳ್ಳಿ, ಕಾಗವಾಡ-ಶ್ರೀಮಂತ ಪಾಟೀಲ, ಗೋಕಾಕ್- ರಮೇಶ್ ಜಾರಕಿಹೊಳಿ, ಯಲ್ಲಾಪುರ-ಶಿವರಾಂ ಹೆಬ್ಬಾರ್, ಹಿರೇಕೆರೂರು-ಬಿ.ಸಿ. ಪಾಟೀಲ್, ವಿಜಯನಗರ-ಆನಂದ್ ಸಿಂಗ್, ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ್, ಕೆ.ಆರ್.ಪುರ-ಬೈರತಿ ಬಸವರಾಜ್.

ಯಶವಂತಪುರ-ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್-ಕೆ. ಗೋಪಾಲಯ್ಯ, ಹೊಸಕೋಟೆ-ಎಂ.ಟಿ.ಬಿ.ನಾಗರಾಜ್, ಕೆ.ಆರ್.ಪೇಟೆ- ಕೆ.ಸಿ. ನಾರಾಯಣಗೌಡ ಹಾಗೂ ಹುಣಸೂರು-ಎಚ್.ವಿಶ್ವನಾಥ್ ಅವರಿಗೆ ಬಿಜೆಪಿ ಟಕೆಟ್ ಪ್ರಕಟಿಸಿದೆ.

ಗೊಂದಲ ನಿರ್ಮಾಣ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮತ್ತು ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಆ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಟಿಕೆಟ್ ಅಂತಿಮಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News