ಕೋಲಾರ ಜಿಲ್ಲೆಯ ಮೂರೂ ನಗರಸಭೆಗಳು ಅತಂತ್ರ: ಪಕ್ಷೇತರ ಅಭ್ಯರ್ಥಿಗಳೇ ನಿರ್ಣಾಯಕ

Update: 2019-11-14 15:18 GMT

ಕೋಲಾರ,.ನ.14: ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್ ನಗರಸಭೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಸುಮಾರು 40 ಸ್ಥಾನಗಳಲ್ಲಿ ಜಯಗಳಿಸಿರುವ ಪಕ್ಷೇತರ ಅಭ್ಯರ್ಥಿಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಜಿಲ್ಲೆಯ ಮೂರು ನಗರಸಭೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿಲ್ಲ. ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್ ನಗರಸಭೆಗಳ 101 ಸ್ಥಾನಗಳ ಚುನಾವಣಾ ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿದೆ.

ಚುನಾವಣೆ ಫಲಿತಾಂಶ ಪ್ರಕಟವಾದ 101 ಸ್ಥಾನಗಳ ಪೈಕಿ ಕಾಂಗ್ರೆಸ್ 32, ಜೆಡಿಎಸ್ 20, ಬಿಜೆಪಿ 8, ಸಿಪಿಎಂ 1 ಸ್ಥಾನದಲ್ಲಿ ಆಯ್ಕೆಯಾಗಿದೆ. ಪಕ್ಷೇತರರು ಸೇರಿದಂತೆ ಇತರ ಅಭ್ಯರ್ಥಿಗಳು 40 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಗಳು ನಿರ್ಣಾಯಕವಾಗಲಿದ್ದಾರೆ.

ಫಲಿತಾಂಶದ ವಿವರ ಹೀಗಿದೆ

ಕೋಲಾರ ನಗರಸಭೆ: ಒಟ್ಟು ವಾರ್ಡುಗಳು- 35, ಕಾಂಗ್ರೆಸ್-12, ಬಿಜೆಪಿ-3, ಜೆಡಿಎಸ್-8, ಪಕ್ಷೇತರ-8, ಎಸ್ಡಿಪಿಐ-4, ಮುಳಬಾಗಿಲು ನಗರಸಭೆ ಒಟ್ಟು 31, ಬಿಜೆಪಿ-2, ಕಾಂಗ್ರೆಸ್-7, ಜೆಡಿಎಸ್-10, ಪಕ್ಷೇತರ-12. ಕೆಜಿಎಫ್ ನಗರಸಭೆ- 35, ಬಿಜೆಪಿ - 3, ಕಾಂಗ್ರೆಸ್ -13, ಜೆಡಿಎಸ್ - 2, ಪಕ್ಷೇತರ - 17.

ಕೋಲಾರ ನಗರಸಭೆ ವಿಜೇತರು: ವಾರ್ಡ್ ನಂ 1 ಶ್ವೇತ (ಜೆಡಿಎಸ್), ವಾರ್ಡ್ ನಂ 2 ಪ್ರವೀಣ್ ಗೌಡ, (ಜೆಡಿಎಸ್), ವಾರ್ಡ್ ನಂ 3 ನಾರಾಯಣಮ್ಮ ಕಾಂಗ್ರೆಸ್, ವಾರ್ಡ್ ನಂ 4 ಪ್ರಸಾದ್ ಬಾಬು -ಕಾಂಗ್ರೆಸ್, ವಾರ್ಡ್ ನಂ 5 ಅಪೂರ್ವ-ಪಕ್ಷೇತರಮ, ವಾರ್ಡ್ ನಂ 6, ಮುಬಾರಕ್-ಕಾಂಗ್ರೆಸ್, ವಾರ್ಡ್ ನಂ 7 ಸುರೇಶ್, ಜೆಡಿಎಸ್- ವಾರ್ಡ್ ನಂ 8 ಪಾವನ- ಕಾಂಗ್ರೆಸ್, ವಾರ್ಡ್ ನಂ 9 ಅಶ್ವತ್-ಪಕ್ಷೇತರ, ವಾರ್ಡ್ ನಂ 10 ರಂಗಮ್ಮ- ಬಿಜೆಪಿ, ವಾರ್ಡ್ ನಂ 11 ಮಂಜುನಾಥ್-ಪಕ್ಷೇತರ, ವಾರ್ಡ್ ನಂ.12 ರಾಕೇಶ್-ಜೆಡಿಎಸ್, ವಾರ್ಡ್ ನಂ.13 ಮಂಜುನಾಥ-ಜೆಡಿಎಸ್, ವಾರ್ಡ್ ನಂ. 14 ಮುರಳಿಗೌಡ-ಬಿಜೆಪಿ,  ವಾರ್ಡ್ ನಂ 15 ಸಂಗೀತ-ಪಕ್ಷೇತರ, ವಾರ್ಡ್ ನಂ 16ಮ ಪೈರೋಜ್ ಖಾನ್-(ಎಸ್.ಡಿ.ಪಿ.ಐ) ವಾರ್ಡ್ ನಂ 17 ಲಿಖಾತ್ ಶಶಿಧರ್-(ಎಸ್.ಡಿ.ಪಿ.ಐ) ವಾರ್ಡ್ ನಂ18 ಸಮೀವುಲ್ಲಾ (ಎಸ್.ಡಿ.ಪಿ.ಐ) ವಾರ್ಡ್ ನಂ 19 - ಅಸ್ಲಂಪಾಷ-ಕಾಂಗ್ರೆಸ್, ವಾರ್ಡ್ ನಂ 20 ಸೌಭಾಗ್ಯ-ಬಿಜೆಪಿ
ವಾರ್ಡ್ ನಂ 21 ಇದಾಯತುಲ್ಲಾ-ಜೆಡಿಎಸ್, ವಾರ್ಡ್ ನಂ 22 ಷನತಾಜ್-ಜೆಡಿಎಸ್, ವಾರ್ಡ್ ನಂ 23 ಅಝ್ರ ನಸ್ರೀನ್-ಕಾಂಗ್ರೆಸ್, ವಾರ್ಡ್ 24 ಮಂಜುನಾಥ್-ಪಕ್ಷೇತರ, ವಾರ್ಡ್ ನಂ. 25 ಗುಣಶೇಖರ್-ಪಕ್ಷೇತರ

ವಾರ್ಡ್ ನಂ. 26 ಭಾಗ್ಯಮ್ಮ-ಕಾಂಗ್ರೆಸ್, ವಾರ್ಡ್ ನಂ 27 ಕೆ. ಲಕ್ಷ್ಮಿದೇವಿ-ಕಾಂಗ್ರೆಸ್, ವಾರ್ಡ್ ನಂ 28 ಖಾಜಾ ಮೊಹಿದ್ದೀನ್-(ಎಸ್.ಡಿ.ಪಿ.ಐ) ವಾರ್ಡ್ ನಂ 29 ಅಂಬರೀಶ್-ಕಾಂಗ್ರೆಸ್, ವಾರ್ಡ್ ನಂ 30 ನೂರಿ-ಪಕ್ಷೇತರ, ವಾರ್ಡ್ 31 ಅಫ್ಸರ್-ಕಾಂಗ್ರೆಸ್, ವಾರ್ಡ್ 32 ನಜ್ಮಾ ಬಾನು-ಜೆಡಿಎಸ್, ವಾರ್ಡ್ 33 ನಾಜೀಯಾ ತಾಜ್-ಕಾಂಗ್ರೆಸ್ ವಾರ್ಡ್ ನಂ 34 ಮುಬಿನ್ ತಾಜ್-ಕಾಂಗ್ರೆಸ್, ವಾರ್ಡ್ ನಂ 35 ತಹಸೀನ್ ತಾಜ್-ಪಕ್ಷೇತರ

ಒಟ್ಟಾರೆ ಕೋಲಾರ ಮತ್ತು ಕೆಜಿಎಫ್ ನಗರ ಸಭೆಗಳಲ್ಲಿ ಕಾಂಗ್ರೆಸ್ ಮತ್ತು ಮುಳಬಾಗಿಲು ನಗರಸಭೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಅನ್ನುವುದು ಕಾದು ನೋಡಬೇಕಿದೆ.

ನಗರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ತಳ್ಳಾಟ, ಕಲ್ಲು ತೂರಾಟಗಳು ನಡೆದಿದ್ದು, ಅಣ್ಣ ತಮ್ಮಂದಿರ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಪೈಕಿ ಓರ್ವನ ಕೈ ತುಂಡಾಗಿದೆ ಎಂದು ತಿಳಿದುಬಂದಿದೆ. 

ಗಾಯಾಳುಗಳು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಸ್ಥಳಕ್ಕೆ ಕೆಜಿಎಫ್ ಎಸ್ಪಿ ಭೇಟಿ ನೀಡಿದ್ದಾರೆ.

ಅಲ್ಲದೇ, ಕೆಜಿಎಫ್ ನಗರಸಭೆ ವಾರ್ಡ್ ನಂ 28 ರಲ್ಲಿ ವಿಜಯೋತ್ಸವ ಮೆರವಣಿಗೆ ವೇಳೆ ಪರಾಜಿತ ಅಭ್ಯರ್ಥಿ ಮನೆಗೆ ಕಲ್ಲು ತೂರಾಟ ನಡೆಸಿದೆ ಎನ್ನಲಾಗಿದ್ದು, ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಕೆಜಿಎಫ್ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಾಗಿದೆ. ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತಗಳ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆದು ಮಧ್ಯಾಹ್ನ 1 ಗಂಟೆ ವೇಳೆಗೆ ಪೂರ್ಣಗೊಂಡಿತ್ತು. ಮತ ಎಣಿಕೆ ಪೂರ್ಣಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್,  ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್ ನಗರಸಭೆ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳಿಂದ ನಡೆಯುತ್ತಿತ್ತು, ಹಲವಾರು ಅಭಿವೃದ್ಧಿ ನಿರ್ಣಯಗಳನ್ನು ಜನ ಪ್ರತಿನಿಧಿಗಳೇ ಮಾಡಬೇಕಾಗಿತ್ತು. ಇದೀಗ ಚುನಾವಣಾ ಪ್ರಕ್ರಿಯೆ ಮುಗಿದಿದೆ, ಶೀಘ್ರದಲ್ಲೇ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ನಿಗದಿಗೊಳಿಸಬಹುದು. ಅಲ್ಲಿಯವರೆಗೆ ಚುನಾಯಿತ ಸದಸ್ಯರು ಜನತೆಯ ಸೇವೆಯಲ್ಲಿ ತೊಡಗಿಸಿಕೊಂಡು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಗೆ ಆಯಾ ನಗರಸಭೆಗಳ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News