ದಾವಣಗೆರೆ ಮನಪಾ ಫಲಿತಾಂಶ ಪ್ರಕಟ: ಅತಂತ್ರ ಸ್ಥಿತಿ ನಿರ್ಮಾಣ, ಕಾಂಗ್ರೆಸ್ ಗೆ 22 ಸ್ಥಾನ

Update: 2019-11-14 17:36 GMT

ದಾವಣಗೆರೆ, ನ.14: ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್‍ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದು, ಮತದಾರರ ಯಾರಿಗೂ ಸಂಪೂರ್ಣ ಬೆಂಬಲ ನೀಡದ ಹಿನ್ನಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು 23 ಸ್ಥಾನಗಳು ಅವಶ್ಯಕವಾಗಿವೆ. ಅದರೆ ಕಾಂಗ್ರೆಸ್ 22 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಿಜೆಪಿ 17 ಸ್ಥಾನ ಪಡೆದು ಎರಡನೇ ಸ್ಥಾನದಲಿದೆ. ಪಕ್ಷೇತರರು 5 ಸ್ಥಾನ, ಜೆಡಿಎಸ್ 1 ಸ್ಥಾನ ಗೆಲ್ಲುವ ಮೂಲಕ ಪಾಲಿಕೆ ಗದ್ದುಗೆ ಹಿಡಿಯಲು ನಿರ್ಣಾಯಕರಾಗಿದ್ದಾರೆ.

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಇಬ್ಬಾಗವಾಗಿ ಕೇವಲ 1 ಸ್ಥಾನ ಪಡೆದಿತ್ತು. ಅದರೆ ಈ ಬಾರಿ 17 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಪಾರಮ್ಯ ಮೆರೆದಿದೆ. ಜೆಡಿಎಸ್ ಈ ಬಾರಿ 1 ಸ್ಥಾನ ಗೆದ್ದಿದೆ.

ಮತಏಣಿಕೆ ಕಾರ್ಯಕ್ಕೆ ಒಟ್ಟು 126 ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಒಂದು ವಾರ್ಡ್ ಗೆ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. 45 ಟೇಬಲ್ ಗಳಲ್ಲಿ ಮತಏಣಿಕೆ ನಡೆದಿದೆ. ಪ್ರತಿ ಚುನಾವಣಾಧಿಕಾರಿಗೆ 5 ಟೇಬಲ್ ಗಳನ್ನು ನೀಡಲಾಗಿತ್ತು. ಮತಏಣಿಕೆ ಕಾರ್ಯಕ್ಕೆ 63 ಮೇಲ್ವಿಚಾರಕರು ಹಾಗೂ 63 ಸಹಾಯಕರು ನೇಮಕಗೊಂಡಿದ್ದರು. ಭದ್ರತೆಗಾಗಿ ಒಟ್ಟು 216 ಸಿಬ್ಬಂದಿ ನಿಯೋಜನೆಗೊಂಡಿದ್ದಾರು. 

ನಗರದ ಹಳೇ ಪಿಬಿ ರಸ್ತೆಯಲ್ಲಿರುವ ಡಿಆರ್‍ಆರ್ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು, 11 ಗಂಟೆ ಸುಮಾರಿಗೆ ಫಲಿತಾಂಶದ ಸಂಪೂರ್ಣ ಚಿತ್ರಣ ಹೊರ ಬಂದಿತ್ತು. ಪಾಲಿಕೆಯ 45 ವಾರ್ಡ್ ಗಳಿಂದ 208 ಅಭ್ಯರ್ಥಿಗಳು ಈ ಬಾರಿ ಸ್ಪರ್ಧಿಸಿದ್ದರು. ಮೊದಲು ಅಂಚೆ ಮತಏಣಿಕೆ ನಡೆಯಿತು. ನಂತರ ವಿದ್ಯುನ್ಮಾನ ಮತಯಂತ್ರಗಳ ಏಣಿಕೆ ಪ್ರಾರಂಭಗೊಂಡಿತು. 

ನೋಟಾ: ಮಹಾನಗರ ಪಾಲಿಕೆಯ 45 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿ ವಾರ್ಡ್‍ನಿಂದ ನೋಟ ಮತಗಳು ಚಲಾವಣೆಯಾಗಿದ್ದು, ಅದರಲ್ಲಿ ಒಟ್ಟು 1663 ಮತಗಳು ನೋಟಾಗೆ ಬಂದಿವೆ.  

ಪತಿ -ಪತ್ನಿಗೆ ಗೆಲವು: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ವಿಶೇಷ ಎಂಬಂತೆ ಪತಿ - ಪತ್ನಿ ಇಬ್ಬರೂ ಗೆಲ್ಲುವ ಮೂಲಕ ಪಾಲಿಕೆಗೆ ಪ್ರವೇಶ ಪಡೆದಿದ್ದಾರೆ. 28ನೇ ವಾರ್ಡಿನಿಂದ ಪತಿ ಜೆ.ಎನ್.ಶ್ರೀನಿವಾಸ್ ಹಾಗೂ 37ನೇ ವಾರ್ಡಿನಿಂದ ಪತ್ನಿ ಶ್ವೇತ ಶ್ರೀನಿವಾಸ್ ಇಬ್ಬರು ಸಹ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ.  

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅವರ ಪುತ್ರ ರಾಕೇಶ್ ಜಾಧವ್ ಅವರು 10 ನೇ ವಾರ್ಡ್‍ನಿಂದ ಹಾಗೂ ಶಾಸಕ ರವೀಂದ್ರನಾಥ ಅವರ ಪುತ್ರಿ ವೀಣಾನಂಜಣ್ಣ ಅವರು 40 ನೇ ವಾರ್ಡ್‍ನಿಂದ ಜಯಗಳಿಸಿದ್ದಾರೆ. ಬಿಜೆಪಿಯಿಂದ ಈ ಬಾರಿ ಅನೇಕ ಹೊಸ ಮುಖಗಳಿವೆ. ಎರಡು ಪಕ್ಷಗಳಲ್ಲಿ ಹೆಚ್ಚು ಹೊಸಬರೇ ಆಯ್ಕೆಯಾಗಿದ್ದಾರೆ.  

ಬಿಜೆಪಿ ಪಕ್ಷದಿಂದ ಮೂವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು ಅವರಲ್ಲಿ 32ನೇ ವಾರ್ಡ್ ನ ಉಮಾಪ್ರಕಾಶ್, 30 ನೇ ವಾರ್ಡ್ ಜಯಮ್ಮ ಗೋಪಿನಾಯ್ಕ್, 13 ವಾರ್ಡ್‍ನ ಸೌಮ್ಯ ನರೇಂದ್ರಕುಮಾರ್ ಗೆಲವು ಸಾಧಿಸಿದ್ದಾರೆ. 45 ನೇ ವಾರ್ಡ್‍ನ ಉದಯಕುಮಾರ್, 19 ನೇ ವಾರ್ಡ್ ಶಿವಪ್ರಕಾಶ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗೆ ಗೆಲವು ಸಾಧಿಸಿದ್ದಾರೆ. 

ಮತ ಎಣಿಕೆ ನಂತರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪತ್ರಕರ್ತರೊಂದಿಗೆ ಮಾತನಾಡಿ, ಪಾಲಿಕೆ ಚುನಾವಣೆ, ಮತ ಎಣಿಕೆಯು ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲ ಅಧಿಕಾರಿ, ಚುನಾವಣಾ ಅಭ್ಯರ್ಥಿಗಳು, ಮಾಧ್ಯಮದವರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ಮಂಜುನಾಥ್ ಆರ್.ಬಳ್ಳಾರಿ, ಚುನಾವಣಾ ತಹಶೀಲ್ದಾರ್ ಪ್ರಸಾದ್ ಇತರೆ ಅಧಿಕಾರಿಗಳು ಹಾಜರಿದ್ದರು. 

ವಿಜಯೋತ್ಸವ: ಮಹಾನಗರ ಪಾಲಿಕೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಗೆಲುವು ಪಡೆದ ಅಭ್ಯರ್ಥಿಗಳ ಹಾಗೂ ಅವರ ಬೆಂಬಲಿಗರ ಸಂಭ್ರಮ ವಾರ್ಡ್ ಗಳಲ್ಲಿ ಕಂಡುಬಂತು. ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಕ್ಷಗಳ ಕಾರ್ಯಕರ್ತರು ನಂತರ ಮೆರವಣಿಗೆ ನಡೆಸಿದರು. ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಪ್ರತಿಮನೆಗಳಿಗೂ ತೆರಳಿ ಸಿಹಿ ಹಂಚಿ ಗೆಲುವಿನ ಸಂಭ್ರಮ ಆಚರಿಸಿದರು. ಬ್ಯಾಂಡ್ ಸೆಟ್, ಡ್ರಮ್ ಸೆಟ್ ಗಳ ಸದ್ದಿಗೆ ಕುಣಿದು ಕುಪ್ಪಳಿಸಿ ಸಂತಸ ಹಂಚಿಕೊಂಡರು.

ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳು
ವಾರ್ಡ್ ಸಂಖ್ಯೆ- ವಿಜೇತರು- ಪಕ್ಷ -ಪಡೆದ ಮತಗಳು
1. ಜಿ.ಡಿ.ಪ್ರಕಾಶ್-ಕಾಂಗ್ರೆಸ್- 3859
3. ಎ.ಬಿ.ಅಬ್ದುಲ್ ರಹೀಂ -ಕಾಂಗ್ರೆಸ್-1852
4. ಅಬ್ದುಲ್ ಕಬೀರ್ ಖಾನ್- ಕಾಂಗ್ರೆಸ್ -4605
5. ಸುಧಾ ಮಂಜುನಾಥ್-ಕಾಂಗ್ರೆಸ್ -2759
7. ವಿನಾಯಕ ಬಿ.ಹೆಚ್-ಕಾಂಗ್ರೆಸ್ -3137
9. ಕಾರಿಗನೂರು ಜಾಕೀರ್ ಅಲಿ-ಕಾಂಗ್ರೆಸ್ - 1440
11. ಸೈಯದ್ ಚಾರ್ಲಿ-ಕಾಂಗ್ರೆಸ್ -2095
12. ಉರ್ ಬಾನು -ಕಾಂಗ್ರೆಸ್ -3925
14.ಚಮನ್ ಸಾಬ್-ಕಾಂಗ್ರೆಸ್ -1859
15.ಆಶಾ ಡಿ.ಎಸ್.-ಕಾಂಗ್ರೆಸ್ -1425
16.ಎ.ನಾಗರಾಜ್-ಕಾಂಗ್ರೆಸ್ -3488
20.ಯಶೋಧ ಉಮೇಶ್ -ಕಾಂಗ್ರೆಸ್-2635
21.ಎಂ.ಕೆ.ಶಿವಲೀಲಾ ಕೊಟ್ರಯ್ಯ-ಕಾಂಗ್ರೆಸ್ -2227
22.ದೇವರಮನೆ ಶಿವಕುಮಾರ್-ಕಾಂಗ್ರೆಸ್ -2199
26.ಅಬ್ದುಲ್ ಲತೀಫ್ -ಕಾಂಗ್ರೆಸ್ -1964
28.ಜೆ.ಎನ್.ಶ್ರೀನಿವಾಸ್-ಕಾಂಗ್ರೆಸ್ -3192
31.ನಾಗರಾಜು-ಕಾಂಗ್ರೆಸ್ -1999
35. ಸವಿತಾ ಗಣೇಶ್ ಹುಲ್ಲುಮನಿ-ಕಾಂಗ್ರೆಸ್-2514
36. ನಾಗರತ್ನಮ್ಮ-ಕಾಂಗ್ರೆಸ್ -2233
37.ಶ್ವೇತಾ ಶ್ರೀನಿವಾಸ್ -ಕಾಂಗ್ರೆಸ್ -2361
38. ಜಿ.ಎಸ್.ಮಂಜುನಾಥ್-ಕಾಂಗ್ರೆಸ್ -1882
43. ಕಲ್ಲಳ್ಳಿ ನಾಗರಾಜ್-ಕಾಂಗ್ರೆಸ್ -3133

ಗೆದ್ದ ಬಿಜೆಪಿ ಅಭ್ಯರ್ಥಿಗಳು
ವಾರ್ಡ್ ಸಂಖ್ಯೆ-ವಿಜೇತರು- ಪಕ್ಷ-ಪಡೆದ ಮತಗಳು
6.ಎಲ್.ಡಿ.ಗೋಣೆಪ್ಪ -ಬಿಜೆಪಿ -1659
8.ಗಾಯತ್ರಿಬಾಯಿ -ಬಿಜೆಪಿ-1155
10.ರಾಕೇಶ್ ಜಾದವ್ -ಬಿಜೆಪಿ-1594
17.ಬಿ.ಜಿ.ಅಜಯಕುಮಾರ್-ಬಿಜೆಪಿ-2395
18.ಸೋಗಿ ಆರ್ ಶಾಂತಕುಮಾರ್-ಬಿಜೆಪಿ-1776
23.ರೇಖಾ ಸುರೇಶ್ -ಬಿಜೆಪಿ-2752
24.ಕೆ.ಪ್ರಸನ್ನಕುಮಾರ್-ಬಿಜೆಪಿ-1454
25.ಎಸ್.ಟಿ.ಸುರೇಶ್-ಬಿಜೆಪಿ-2153
27.ಯಶೋಧ ದುಗ್ಗಪ್ಪ-ಬಿಜೆಪಿ-1986
29.ರೇಣುಕಾಶ್ರೀನಿವಾಸ್-ಬಿಜೆಪಿ-2853
33.ಕೆ.ಎಂ.ವೀರೇಶ್-ಬಿಜೆಪಿ-1983
39.ಗೀತಾದಿಳ್ಯಪ್ಪ -ಬಿಜೆಪಿ-2179
40.ವೀಣಾನಂಜಣ್ಣ-ಬಿಜೆಪಿ -2662
41.ಗೀತಾ ನಾಗಪ್ಪ-ಬಿಜೆಪಿ-2237
42.ಗೌರಮ್ಮ ಗಿರಿರಾಜ್-ಬಿಜೆಪಿ-1096
44.ಹೆಚ್.ಆರ್.ಶಿಲ್ಪ-ಬಿಜೆಪಿ-2097

ಗೆದ್ದ ಪಕ್ಷೇತರ ಅಭ್ಯರ್ಥಿಗಳು
ವಾರ್ಡ್ ಸಂಖ್ಯೆ-ವಿಜೇತರು- ಪಕ್ಷ-ಪಡೆದ ಮತಗಳು
13.ಸೌಮ್ಯ ನರೇಂದ್ರಕುಮಾರ್ -ಪಕ್ಷೇತರರು-1544
19.ಶಿವಪ್ರಕಾಶ್ ಆರ್.ಎಲ್.-ಪಕ್ಷೇತರರು-1695
30.ಆರ್.ಜಯಮ್ಮ -ಪಕ್ಷೇತರರು-1561
32.ಉಮಾಪ್ರಕಾಶ್- ಪಕ್ಷೇತರರು-1814
45.ಹೆಚ್.ಉದಯಕುಮಾರ್ -ಪಕ್ಷೇತರರು-1567

ಗೆದ್ದ ಜೆಡಿಎಸ್ ಅಭ್ಯರ್ಥಿ-ಪಡೆದ ಮತಗಳು
2.ನೂರ್ ಜಹಾನ್ ಬಿ-ಜೆಡಿಎಸ್-2825

ಒಟ್ಟು: ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1, ಪಕ್ಷೇತರರು 5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News