ಕಲ್ಲಿದ್ದಲು ಹಗರಣ: ಮೂವರಿಗೆ ಜೈಲು ಶಿಕ್ಷೆ

Update: 2019-11-14 17:53 GMT

ಹೊಸದಿಲ್ಲಿ, ನ. 14: ಜಾರ್ಖಂಡ್‌ನಲ್ಲಿ ಉತ್ತರ ಧಾಧು ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ಮೂವರಿಗೆ ವಿವಿಧ ಅವಧಿಯ ಕಾರಾಗೃಹ ಶಿಕ್ಷೆ ವಿಧಿಸಿದೆ.

ಪಾವಂಜೆ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್‌ನ ಇಬ್ಬರು ನಿರ್ದೇಶಕರಾದ ಗ್ಯಾನ್‌ಚಂದ್ ಪ್ರಸಾದ್ ಅಗರ್ವಾಲ್ (70) ಹಾಗೂ ಉಮೇಶ್ ಅಗರ್ವಾಲ್ (58)ಗೆ ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಅಪರಾಧಕ್ಕಾಗಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಹರಿ ಮೆಷಿನ್ಸ್ ಲಿಮಿಟೆಡ್‌ನ ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್) ಎಸ್.ಕೆ. ಕನುಂಗೊ (65) ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ವಿಶೇಷ ನ್ಯಾಯಾಧೀಶ ಭಾರತ್ ಪರಾಸರ್ ಕಂಪೆನಿಗೆ 75 ಲಕ್ಷ ರೂಪಾಯಿ, ಇಬ್ಬರು ಅಗರ್ವಾಲ್‌ರಿಗೆ ತಲಾ 40 ಲಕ್ಷ ರೂಪಾಯಿ ಹಾಗೂ ಕನುಂಗೊಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News