ಬಿಜೆಪಿಯಿಂದ ಕುರುಬ ಸಮುದಾಯಕ್ಕೆ ವಂಚನೆ: ಹಾಲುಮತಾ ಮಹಾಸಭಾ ಆಕ್ರೋಶ

Update: 2019-11-15 17:13 GMT

ಬೆಂಗಳೂರು, ನ.15: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕುರುಬ ಸಮುದಾಯದವರಿಗೆ ಟಿಕೆಟ್ ನೀಡದಿರುವುದಕ್ಕೆ ಹಾಲುಮತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಪತನಗೊಳಿಸಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಆರ್.ಶಂಕರ್, ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ಭೈರತಿ ಬಸವರಾಜು ಕಾರಣಕರ್ತರು. ಆದರೆ, ಗುರುವಾರ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ ಸಂದರ್ಭದಲ್ಲಿ 13 ಕ್ಷೇತ್ರಗಳಿಗೆ ಅಷ್ಟೇ ಟಿಕೆಟ್ ನೀಡಿದ್ದು, ರಾಣೆಬೆನ್ನೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚನೆ ಮಾಡಿ, ಬೇರೆಯವರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಸಭಾ ಆಕ್ಷೇಪಿಸಿದೆ.

2008 ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ, ಬೆಂಬಲ ನೀಡಿದ್ದು ಕುರುಬ ಸಮುದಾಯದ ವರ್ತೂರ್ ಪ್ರಕಾಶ್. ಆನಂತರ ಬಿಜೆಪಿ ಪಕ್ಷದಲ್ಲಿನ ಭಿನ್ನಮತದಿಂದ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸುವ ಸಂದರ್ಭ ಬಂದಾಗಲೂ ಸಹಾಯ ಮಾಡಿದ್ದು ವರ್ತೂರು ಪ್ರಕಾಶ್. ಆದರೆ, ಇಂದು ಕುರುಬ ಸಮುದಾಯದ ತ್ಯಾಗವನ್ನು ಮರೆತು, ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದೇ ವಂಚಿಸಿರುವುದು ಎಷ್ಟು ಸರಿ ಎಂದು ಸಭಾ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News