ನ.17ರಂದು ಸಿಜೆಐ ಗೊಗೊಯಿ ನಿವೃತ್ತಿ

Update: 2019-11-15 17:14 GMT

ಹೊಸದಿಲ್ಲಿ, ನ.15: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ನವೆಂಬರ್ 17ರಂದು ಸೇವಾನಿವೃತ್ತಿ ಹೊಂದಲಿದ್ದಾರೆ. ನ.15ರಂದು ಅವರು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ಬಾರಿಗೆ ಕಲಾಪ ನಿರ್ವಹಿಸಿದ್ದಾರೆ.

 ಕೊನೆ ದಿನದ ಕೆಲಸ ನಿರ್ವಹಿಸುವಾಗ ಸುಪ್ರೀಂಕೋರ್ಟ್‌ನ ಸಂಪ್ರದಾಯದಂತೆ ಕೋರ್ಟ್ 1ರಲ್ಲಿ ನಿಯೋಜಿತ ಸಿಜೆಐಯೊಂದಿಗೆ ಕುಳಿತು ನ.15ರಂದು ಲಿಸ್ಟ್ ಆಗಿದ್ದ ಎಲ್ಲಾ 10 ಪ್ರಕರಣಗಳಲ್ಲೂ ನೋಟಿಸ್ ನೀಡಿದರು. ಅಲ್ಲದೆ ಎಲ್ಲಾ ನ್ಯಾಯವಾದಿಗಳಿಗೂ ಧನ್ಯವಾದ ಸಲ್ಲಿಸಿದರು.

 2018ರ ಅಕ್ಟೋಬರ್ 3ರಿಂದ ಸಿಜೆಐ ಕರ್ತವ್ಯ ನಿರ್ವಹಿಸಿದ್ದ ಗೊಗೊಯಿ ತಮ್ಮ ಕಾರ್ಯಾವಧಿಯಲ್ಲಿ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅತೀ ಸೂಕ್ಷ್ಮ ವ್ಯಾಜ್ಯವಾಗಿದ್ದ ಅಯೋಧ್ಯೆ ಪ್ರಕರಣ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೂ ಪ್ರವೇಶಾವಕಾಶ, ರಫೇಲ್ ಯುದ್ಧವಿಮಾನ ಪ್ರಕರಣ ಮತ್ತು ಅಸ್ಸಾಂನ ಎನ್‌ಆರ್‌ಸಿ ಪ್ರಕರಣ ಪ್ರಮುಖವಾದುದು.

ದೇಶದ 46ನೇ ಸಿಜೆಐ ಆಗಿ ನೇಮಕವಾಗಿದ್ದ ಗೊಗೊಯಿ ನಿವೃತ್ತರಾದ ಬಳಿಕ ಶರದ್ ಅರವಿಂದ್ ಬೊಬ್ಡೆ ನೂತನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News