ಕೇರಳ ಸರಕಾರ ಭದ್ರತೆ ಒದಗಿಸದೇ ಇದ್ದರೂ ಶಬರಿಮಲೆಗೆ ಭೇಟಿ ನೀಡುವೆ: ತೃಪ್ತಿ ದೇಸಾಯಿ

Update: 2019-11-16 07:31 GMT

ಪುಣೆ(ಮಹಾರಾಷ್ಟ್ರ), ನ.16: ಕೇರಳ ಸರಕಾರ ತನಗೆ ಭದ್ರತೆ ನೀಡಲಿ ಅಥವಾ ನೀಡದಿರಲಿ ತಾನು ಮಾತ್ರ ನ.20ರ ನಂತರ ಶಬರಿಮಲೆಗೆ ತೆರಳುತ್ತೇನೆ ಎಂದು ಮಹಿಳಾ ಹಕ್ಕು ಹೋರಾಟಗಾರ್ತಿ ಹಾಗೂ ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘‘ನ.20ರ ಬಳಿಕ ನಾನು ಶಬರಿಮಲೆಗೆ ತೆರಳುವೆ. ನಾನು ಕೇರಳ ಸರಕಾರದಿಂದ ಭದ್ರತೆಯನ್ನು ನಿರೀಕ್ಷಿಸುತ್ತಿದ್ದೇನೆ. ಆದರೆ, ಭದ್ರತೆ ನೀಡುವುದು ಅಥವಾ ನೀಡದೇ ಇರುವುದು ಸರಕಾರಕ್ಕೆ ಬಿಟ್ಟ ವಿಚಾರವಾಗಿದೆ. ನನಗೆ ರಕ್ಷಣೆ ನೀಡದಿದ್ದರೂ ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ಭೇಟಿ ನೀಡುತ್ತೇನೆ’’ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ಶಬರಿಮಲೆ ದೇಗುಲದ ಬಾಗಿಲು ಶನಿವಾರ ಸಂಜೆ ತೆರೆಯಲಾಗುತ್ತಿದೆ. ದೇಗುಲದ ಬಾಗಿಲು ತೆರೆಯುವ ಮುನ್ನಾದಿನವಾದ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳದ ದೇವಸ್ವಂ ಮಂಡಳಿಯ ಸಚಿವ ಕೆ.ಸುರೇಂದ್ರನ್, ‘‘ಶಬರಿಮಲೆ ದೇಗುಲಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಾಜ್ಯ ಸರಕಾರ ಭದ್ರತೆ ಒದಗಿಸುವುದಿಲ್ಲ. ಭದ್ರತೆಯ ಅಗತ್ಯವಿರುವವರು ಸುಪ್ರೀಂಕೋರ್ಟ್‌ನಿಂದ ಆದೇಶ ಪಡೆದು ಬರಬೇಕು. ತೃಪ್ತಿ ದೇಸಾಯಿಯಂತಹ ಹೋರಾಟಗಾರರು ಶಬರಿಮಲೆ ದೇಗುಲವನ್ನು ತನ್ನ ಶಕ್ತಿ ಪ್ರದರ್ಶನದ ಸ್ಥಳವಾಗಿ ಪರಿಗಣಿಸಬಾರದು ಎಂದು ಸಲಹೆ ನೀಡಿದರು.

ತೃಪ್ತಿ ದೇಸಾಯಿ ಕಳೆದ ವರ್ಷವೂ ಶಬರಿಮಲೆ ದೇಗುಲಪ್ರವೇಶಿಸಲು ಕೇರಳಕ್ಕೆ ಆಗಮಿಸಿದಾಗ ಕೊಚ್ಚಿ ಏರ್‌ಪೋರ್ಟ್‌ನಲ್ಲಿ ತಡೆದು ವಾಪಸ್ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News