ಮೇಲಧಿಕಾರಿಯ ಸರ್ವಾಧಿಕಾರಿ ಧೋರಣೆ ಖಂಡಿಸಿ ಅಪರೂಪದ ಪ್ರತಿಭಟನೆ ನಡೆಸಿದ ಪೊಲೀಸ್ ಅಧಿಕಾರಿ!

Update: 2019-11-16 09:38 GMT
ವಿಜಯಪ್ರತಾಪ್ (Photo: ANI)

ಇಟಾವಾ(ಉತ್ತರಪ್ರದೇಶ),ನ.16: ಪೊಲೀಸ್ ಸ್ಟೇಶನ್‌ನಿಂದ ವರ್ಗಾವಣೆ ಮಾಡಿದ್ದಕ್ಕೆ ಆಕ್ರೋಶಗೊಂಡಿದ್ದ ಉತ್ತರಪ್ರದೇಶದ ಸಬ್ ಇನ್ಸ್‌ಪೆಕ್ಟರ್‌ವೊಬ್ಬರು(ಎಸ್‌ಐ)ಮೇಲಧಿಕಾರಿಯ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಅಪರೂಪದ ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.

ಸಬ್-ಇನ್ಸ್‌ಪೆಕ್ಟರ್ ವಿಜಯಪ್ರತಾಪ್ ತಾನು ವರ್ಗಾವಣೆಯಾಗಿರುವ ಪೊಲೀಸ್ ಲೈನ್ ಸ್ಟೇಶನ್‌ನಿಂದ ಬಿಥೌಲಿಯ ಪೊಲೀಸ್ ಸ್ಟೇಶನ್‌ಗೆ ಸುಮಾರು 65 ಕಿಲೋ ಮೀಟರ್ ತನಕ ನಿರಂತರವಾಗಿ ಓಡಿದ್ದಾರೆ. ಈ ವೇಳೆ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

‘‘ಮೇಲಧಿಕಾರಿಯ ಸರ್ವಾಧಿಕಾರಿ ಧೋರಣೆಯಿಂದಾಗಿ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧೀಕ್ಷಕರು ಪೊಲೀಸ್ ಲೈನ್ ಸ್ಟೇಶನ್‌ನಲ್ಲಿ ಇರುವಂತೆ ತಿಳಿಸಿದ್ದರು. ಆರ್‌ಐ ಅವರು ನನ್ನನ್ನು ಬಲವಂತವಾಗಿ ಬಿಥೌಲಿಗೆ ವರ್ಗಾವಣೆ ಮಾಡಿದ್ದಾರೆ. ಬಿಥೌಲಿಗೆ ನಾನು ಓಡಿಕೊಂಡು ಹೋಗಿದ್ದೇನೆ. ಇದನ್ನು ನೀವು ನನ್ನ ಆಕ್ರೋಶ ಅಥವಾ ಅಸಮಾಧಾನ ಎಂದು ಕರೆಯಬಹುದು ಎಂದು ಪ್ರತಾಪ್ ಹೇಳಿದ್ದಾರೆ.

ಎಸ್‌ಐ ಪ್ರತಾಪ್ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News