ಕೆಎಸ್ಸಾರ್ಟಿಸಿಗೆ ಸ್ಮಾರ್ಟ್ ಮೊಬಿಲಿಟಿ ಪ್ರಶಸ್ತಿ

Update: 2019-11-16 16:04 GMT

ಬೆಂಗಳೂರು, ನ.16: ಕೆಎಸ್ಸಾರ್ಟಿಸಿಯು 16 ಸಣ್ಣ ಮತ್ತು ಮಧ್ಯಮ ನಗರ ಪಟ್ಟಣಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ ಎಕನಾಮಿಕ್ಸ್ ಟೈಮ್ಸ್ ಗವರ್ನ್‌ಮೆಂಟ್.ಕಾಮ್ ವತಿಯಿಂದ ಗ್ಲೋಬಲ್ ಸ್ಮಾರ್ಟ್ ಮೊಬಿಲಿಟಿ ಪ್ರಶಸ್ತಿ ಲಭಿಸಿದೆ. 

ಕೆಎಸ್ಸಾರ್ಟಿಸಿಯು ಪ್ರತಿದಿನ 11,075 ಟ್ರಿಪ್‌ಗಳಿಂದ, 5.10 ಲಕ್ಷ ಜನರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿದೆ. ಇದಕ್ಕಾಗಿ ಪ್ರಶಸ್ತಿ ಲಭಿಸಿದ್ದು, ನಾಗಾಲ್ಯಾಂಡ್ ಸರಕಾರ ಸಚಿವ ತೆಂಜಮ್ ಇಮ್ನಾ ಅಲಾಂಗ್ ಹಾಗೂ ಎಕನಾಮಿಕ್ಸ್ ಟೈಮ್ಸ್ ಗವರ್ನ್‌ಮೆಂಟ್.ಕಾಮ್ ಸಂಪಾದಕ ಬಿ.ರಾಧಾಕೃಷ್ಣರವರು ಕೆಎಸ್ಸಾರ್ಟಿಸಿಯ ನಿರ್ದೇಶಕಿ ಕವಿತಾ ಎಸ್.ಮನ್ನಿಕೇರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News