ಯುದ್ಧವಿರಾಮ ಹೊರತಾಗಿಯೂ ಮತ್ತೆ ಇಸ್ರೇಲ್-ಫೆಲೆಸ್ತೀನ್ ಸಂಘರ್ಷ

Update: 2019-11-16 16:30 GMT

ಗಾಜಾ ಸಿಟಿ (ಫೆಲೆಸ್ತೀನ್), ನ. 16: ಫೆಲೆಸ್ತೀನ್ ಪ್ರದೇಶಗಳಿಂದ ಇಸ್ರೇಲ್‌ನೆಡೆಗೆ ರಾಕೆಟ್‌ಗಳು ಹಾರಿದ ಬಳಿಕ, ಶನಿವಾರ ಮುಂಜಾನೆ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ಗಾಝಾದ ಮೇಲೆ ಇಸ್ರೇಲ್ ಹೊಸ ದಾಳಿಗಳನ್ನು ನಡೆಸಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಎರಡು ದಿನಗಳ ಹಿಂದೆ ಯುದ್ಧವಿರಾಮ ಜಾರಿಗೆ ಬಂದ ಹೊರತಾಗಿಯೂ ಹೊಸ ದಾಳಿ ನಡೆದಿದೆ. ಈ ಬಾರಿ, ಗಾಝಾದ ಮೇಲೆ ನಿಯಂತ್ರಣ ಹೊಂದಿರುವ ಹಮಾಸ್ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಕಳೆದ ವಾರ ಹಿಂಸಾಚಾರ ಸ್ಫೋಟಗೊಂಡಾಗ ಹಮಾಸ್ ದೂರವೇ ಉಳಿದಿತ್ತು.

‘‘ಗಾಝಾ ಪಟ್ಟಿಯಿಂದ ಇಸ್ರೇಲ್ ಭೂಭಾಗದತ್ತ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ. ಆದರೆ, ಅವುಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ಮಧ್ಯದಲ್ಲೇ ತುಂಡರಿಸಿವೆ’’ ಎಂದು ಇಸ್ರೇಲ್ ಭದ್ರತಾ ಪಡೆಗಳು ಹೇಳಿವೆ.

ಗಾಝಾ ಪಟ್ಟಿಯ ಉತ್ತರದಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿಗಳನ್ನು ನಡೆಸಿದೆ ಎಂದು ಫೆಲೆಸ್ತೀನ್ ಭದ್ರತಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News