'ಡೆಂಗ್' ನಾಲ್ಕು ಪಟ್ಟು ಹೆಚ್ಚಳ: ರಾಜ್ಯದಲ್ಲಿ ಸೋಂಕಿನಿಂದ ಬಳಲಿದವರ ಸಂಖ್ಯೆ ಎಷ್ಟು ಗೊತ್ತೇ ?

Update: 2019-11-16 17:06 GMT

ಬೆಂಗಳೂರು, ನ.16: ಡೆಂಗ್ ಜ್ವರದ ಹಾವಳಿ ರಾಜ್ಯದಲ್ಲಿ ಮುಂದುವರೆದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ಜ.1ರಿಂದ ಈವರೆಗೆ 14,757 ಮಂದಿ ಸೋಂಕಿನಿಂದ ಬಳಲಿದ್ದಾರೆ. ಈ ವರ್ಷ ಅತಿ ಹೆಚ್ಚು ಡೆಂಗ್ ಪ್ರಕರಣಗಳು ವರದಿಯಾದಂತಾಗಿದೆ.

ಕಳೆದ ವರ್ಷದ ನವೆಂಬರ್ ವೇಳೆಗೆ 3,357 ಡೆಂಗ್ ಪ್ರಕರಣಗಳು ವರದಿಯಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 698 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ವರ್ಷ ಡೆಂಗ್ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚು ವರದಿಯಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ 8,483 ಸೋಂಕಿನಿಂದ ಬಳಲಿದ್ದಾರೆ. ಕಳೆದ ವರ್ಷ ಡೆಂಗ್ ಜ್ವರದಿಂದ 5 ಮಂದಿ ಮೃತಪಟ್ಟಿದ್ದು, 2,476 ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ, ಈ ವರ್ಷ ಪದೇ ಪದೇ ಮಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೆಂಗ್ ಜ್ವರ ವರ್ಷ ಪೂರ್ತಿ ಕಾಡಿದೆ. ಇದೀಗ ನಿಯಂತ್ರಣಕ್ಕೆ ಬರುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News