ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರ ಮರಣ ಪ್ರಮಾಣ ಗಣನೀಯ ಇಳಿಕೆ

Update: 2019-11-18 18:36 GMT

ಬೆಂಗಳೂರು, ನ.18: ಹೆರಿಗೆ ವೇಳೆ ಮೃತಪಡುತ್ತಿರುವ ಮಹಿಳೆಯರ ಮರಣ ಪ್ರಮಾಣ ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಇತ್ತೀಚೆಗೆ ಬಿಡುಗಡೆ ಮಾಡಿದ ಎಸ್‌ಆರ್‌ಎಸ್ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಮರಣ ಪ್ರಮಾಣ ಶೇ.10.2 ರಷ್ಟು ಇಳಿಮುಖವಾಗಿದೆ. 2014-16ರ ವರದಿ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 108 ತಾಯಂದಿರು ಮೃತಪಡುತ್ತಿದ್ದರು. 2015-17ರ ಅವಧಿಯ ವರದಿಯಲ್ಲಿ ಇದು 97ಕ್ಕೆ ಇಳಿದಿದೆ. ಮಹಾರಾಷ್ಟ್ರ 2ನೇ ಸ್ಥಾನದಲ್ಲಿದ್ದು, ಹೆರಿಗೆ ಸಂದರ್ಭದಲ್ಲಿ ಮರಣ ಹೊಂದುವ ತಾಯಂದಿರ ಪ್ರಮಾಣ ಶೇ.9.8ಕ್ಕೆ ಇಳಿದಿದೆ. 3ನೇ ಸ್ಥಾನದಲ್ಲಿರುವ ಕೇರಳ ಶೇ.8.7 ರಷ್ಟಿದೆ. ದೇಶದ ಒಟ್ಟಾರೆ ಸರಾಸರಿ ಶೇ.6.2 ರಷ್ಟಿದೆ.

ಶೇ.20ಕ್ಕೆ ಇಳಿಯುವ ನಿರೀಕ್ಷೆ: ಕಳೆದ ಎರಡು ವರ್ಷಗಳಿಂದ ಗರ್ಭಿಣಿ ಮಹಿಳೆಯರ ಆರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿರುವ ಕ್ರಮಗಳಿಂದಾಗಿ ಹೆರಿಗೆ ವೇಳೆ ತಾಯಿಯ ಮರಣದ ಪ್ರಮಾಣ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News