ಟಾಟಾ ಸ್ಟೀಲ್‌ನಿಂದ ಯುರೋಪ್‌ನಲ್ಲಿ 3,000 ಉದ್ಯೋಗ ಕಡಿತ

Update: 2019-11-19 16:21 GMT
ಫೋಟೊ:  REUTERS

ದ ಹೇಗ್ (ನೆದರ್‌ಲ್ಯಾಂಡ್ಸ್), ನ. 19: ಯುರೋಪ್‌ನಲ್ಲಿ ಸುಮಾರು 3,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಭಾರತೀಯ ಕಂಪೆನಿ ಟಾಟಾ ಸ್ಟೀಲ್ ಸೋಮವಾರ ಹೇಳಿದೆ. ವಿಲೀನ ಯೋಜನೆಯು ಕೈಗೂಡದ ಹಿನ್ನೆಲೆಯಲ್ಲಿ, ಯುರೋಪ್‌ನ ಕಾರ್ಯಾಚರಣೆಗಳನ್ನು ಪುನರ್ರಚಿಸುವುದಾಗಿ ಅದು ಘೋಷಿಸಿದೆ.

ಸಾಂಸ್ಥಿಕ ಸವಾಲುಗಳು, ಯುರೋಪಿಯನ್ ಉಕ್ಕಿಗೆ ಬೇಡಿಕೆ ತಗ್ಗಿರುವುದು ಹಾಗೂ ಅಮೆರಿಕ-ಚೀನಾ ವ್ಯಾಪಾರ ಸಂಘರ್ಷದಿಂದಾಗಿ ಸಮಸ್ಯೆಗಳು ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಯುರೋಪ್‌ನಲ್ಲಿನ ಸಾವಿರಾರು ಉದ್ಯೋಗಗಳನ್ನು ಟಾಟಾ ಸ್ಟೀಲ್ ಕಡಿತಗೊಳಿಸಲಿದೆ ಎಂಬ ವಾರಗಳ ಕಾಲದ ಊಹಾಪೋಹಗಳ ಬಳಿಕ ಈ ಘೋಷಣೆ ಹೊರಬಿದ್ದಿದೆ.

ನೆದರ್‌ಲ್ಯಾಂಡ್ಸ್‌ನಲ್ಲಿ ಟಾಟಾ ಸ್ಟೀಲ್ ಕಂಪೆನಿಯಲ್ಲಿ 11,000 ಮಂದಿ ಕೆಲಸಗಾರರಿದ್ದಾರೆ. ಯುರೋಪ್‌ನಾದ್ಯಂತ ಕಂಪೆನಿಯು ಸುಮಾರು 20,000 ಕೆಲಸಗಾರರನ್ನು ಹೊಂದಿದೆ.

‘‘ಯುರೋಪ್‌ನ ಉಕ್ಕು ಬೇಡಿಕೆಯು ಸ್ಥಗಿತಗೊಂಡಿರುವುದು ಹಾಗೂ ಜಾಗತಿಕ ಮಟ್ಟದಲ್ಲಿ ಅಗತ್ಯಕ್ಕೂ ಹೆಚ್ಚಿನ ಉಕ್ಕು ಉತ್ಪಾದನೆ ಆಗುತ್ತಿರುವುದು ಹಾಗೂ ಚೀನಾ-ಅಮೆರಿಕ ವ್ಯಾಪಾರ ಸಮರ ಈ ಸ್ಥಿತಿಗೆ ಕಾರಣವಾಗಿದೆ. ಇದರಿಂದಾಗಿ ಜಗತ್ತಿನ ಹೆಚ್ಚುವರಿ ಉಕ್ಕನ್ನು ಯುರೋಪ್‌ನಲ್ಲಿ ಹೇರಲಾಗುತ್ತಿದೆ’’ ಎಂದು ಟಾಟಾ ಸ್ಟೀಲ್‌ನ ಯುರೋಪ್ ಘಟಕವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News