ಕೊಪ್ಪ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಯುವಕನ ಬಂಧನ

Update: 2019-11-19 16:50 GMT

ಚಿಕ್ಕಮಗಳೂರು, ನ.19: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಯುವಕನೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪ ಪಟ್ಟಣದಲ್ಲಿ ಮಂಗಳವಾರ ವರದಿಯಾಗಿದೆ.

ಮಂಗಳವಾರ ಕೊಪ್ಪ ಪಟ್ಟಣದ ಸುಭಾಷ್ ರಸ್ತೆಯ ಕೂಡು ಜಂಕ್ಷನಲ್ಲಿರುವ ರಂಗೋಲಿ ಸ್ಟೋರ್ ಬಳಿ ಬಾಲಕಿ ತನ್ನ ಸಹೋದರನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇವರನ್ನು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ತಾಲೂಕಿನ ಬಪ್ಪುಂಜೆ ಕೈಮರ ನಿವಾಸಿ ಸುನಿಲ್‍ ಕುಮಾರ್ ಎಂಬಾತ ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿ ಬೈಕ್ ನಿಲ್ಲಿಸಿ ಬಾಲಕಿ ಹಾಗೂ ಆಕೆಯ ಸಹೋದರನ್ನು ಹಿಂಬಾಲಿಸಿ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಬಾಲಕಿಯ ಪೋಷಕರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News