ನೇಮಕಾತಿಗಾಗಿ ಸಂದರ್ಶನ

Update: 2019-11-19 17:30 GMT

ಬೆಂಗಳೂರು, ನ.19: ಕರ್ನಾಟಕ ಲೋಕಸೇವಾ ಆಯೋಗವು ಮಾ.23. 2018ರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ 3 ಹುದ್ದೆಗಳ ನೇಮಕಾತಿಗಾಗಿ ಸಂದರ್ಶನವನ್ನು ನ.28, 2019 ರಂದು ಬೆಳಗ್ಗೆ 9.30ಕ್ಕೆ ಆಯೋಗದ ಕೇಂದ್ರ ಕಚೇರಿ, ಬೆಂಗಳೂರು ಇಲ್ಲಿ ನಿಗದಿಪಡಿಸಿದೆ.

ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಗಳನ್ನು ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ http://kpsc.kar.nic.in/Eligibility List ಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News