ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಳಚುವ ದಿನ ದೂರವಿಲ್ಲ: ಸಚಿವ ಸುರೇಶ್‍ ಕುಮಾರ್

Update: 2019-11-19 18:26 GMT

ಹನೂರು: ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂಬ ಅಪವಾದದ ಹಣೆಪಟ್ಟಿ ಕಳಚುವ ದಿನ ದೂರವಿಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ಹೇಳಿದರು.

ಹನೂರು ತಾಲ್ಲೂಕಿನ ಗಡಿಹಂಚಿನ ಗ್ರಾಮವಾದ ಗೋಪಿನಾಥ್‍ಮ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೂಳ್ಳಲಾಗಿದ್ದ ಶಾಲಾ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆ ಹಲವು ವರ್ಷಗಳಿಂದ ಮೂಲಭೂತಸೌಕರ್ಯಗಳಿಂದ ವಂಚಿತವಾಗಿದ್ದು ಹಿಂದುಳಿದ ಜಿಲ್ಲೆ ಎಂಬ ಅಪವಾದದ ಹಣೆಪಟ್ಟಿ ಹೊಂದಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ನಾನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ಜಿಲ್ಲಾಡಳಿತ ಮತ್ತು ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಾ ಜಿಲ್ಲೆಯ ವಿವಿದಡೆಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಅಭಿವೃದ್ದಿ  ಕಾರ್ಯಗಳನ್ನು ಪರಿಶೀಲಿಸಿದ್ದೇನೆ ಹಾಗೂ ಅಬಿವೃದ್ದಿ ಕೆಲಸ ಚುರುಕುಗೂಳ್ಳುವಂತೆ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಶೀಘ್ರದಲ್ಲಿಯೇ ಮುಂದುವರೆದ ಜಿಲ್ಲೆಗಳ ಪಟ್ಟಿಯಲ್ಲಿರುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಜೊತೆ ಸಂವಾದ: ಶಾಲಾ ವಾಸ್ತವ್ಯದ ಕಾರ್ಯಕ್ರಮದ ಗೋಪಿನಾಥ್‍ಮ್ ಗ್ರಾಮದ ಮಾರಿಯಮ್ಮ ದೇವಸ್ಥಾನದಿಂದ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಪೂರ್ಣಕುಂಬ ಸ್ವಾಗತ ಮುಖಾಂತರ ಶಾಲೆ ಆವರಣಕ್ಕೆ ಆಗಮಿಸುತ್ತಿದ್ದಂತೆ  ನೇರವಾಗಿ ಮಕ್ಕಳು ಕುಳಿತಿದ್ದ ಸ್ಥಳಕ್ಕೆ ತೆರಳಿದ ಅವರು ವ್ಯಾಸಂಗಕ್ಕಾಗಿ ನಿಮಗೆ ಏನೇನು ಅಗತ್ಯವಿದೆ? ಸೌಲಭ್ಯಗಳು ಲಭ್ಯವಿದೆಯೇ? ಎಂದುದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. 7 ತರಗತಿಗೆ ಪಬ್ಲಿಕ್ ಪರೀಕ್ಷೆ ನೆಡೆಸುವುದು ಸೂಕ್ತವೇ? ನಿಮ್ಮ ಅನಿಸಿಕೆಗಳು ಎಂದು ಕೇಳಿದರು. ಅದಕ್ಕೆ ಪ್ರತಿಕ್ರಯಿಸಿದ ಮಕ್ಕಳು ಪರೀಕ್ಷೆಯಲ್ಲಿ ಪಾರದರ್ಶಕತೆ ಹೊತ್ತು ನೀಡುವುದರ ಜೊತೆಗೆ ಶಾಲೆಯಲ್ಲಿ ಲ್ಯಾಬೋರೇಟರಿ ವಿದ್ಯುತ್ ಸಂಪರ್ಕ, ಹೆಚ್ಚುವರಿ ಶಾಲಾಕೂಠಡಿ, ಈ ಗ್ರಾಮದಲ್ಲಿ  ಹಾಸ್ಟಲ್ ವ್ಯವಸ್ಥೆ, ಪಿ.ಯು ಕಾಲೇಜು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು  

ಬಸ್ ದರ ಕಡಿಮೆ ಮಾಡಿ:  5 ನೇ ತರಗತಿ ದೀನಾ 1ರಿಂದ 4 ನೇ ತರಗತಿ ತನಕ ತಮಿಳು ಮಾದ್ಯಮದಲ್ಲಿ ವ್ಯಾಸಂಗ ಮಾಡಿದ್ದು, ಕನ್ನಡ ಮಾದ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಬಿಸಲು ಸಚಿವರಲ್ಲಿ ಮನವಿ ಮಾಡಿದನು. ಮತ್ತೊಬ್ಬ ವಿದ್ಯಾರ್ಥಿ ಕೂಳ್ಳೇಗಾಲದಿಂದ ಮೈಸೂರಿಗೆ ಸುಮಾರು 60ಕಿ.ಮೀ ಇದ್ದು 55 ರೂ ದರ ನಿಗಧಿಪಡಿಸಿದ್ದಾರೆ. ಆದರೆ  ನಮ್ಮ ಸ್ವಗ್ರಾಮ ಗೋಪಿನಾಥ್‍ಯಿಂದ ಪಾಲಾರ್‍ಗೆ 16 ಕಿ,ಮೀ ದೂರಕ್ಕೆ 25 ರೂ. ದರ ವಿಧಿಸಲಾಗಿದೆ ಮತ್ತು ಪಾಲಾರ್‍ಯಿಂದ ಮಹದೇಶ್ವರಬೆಟ್ಟಕ್ಕಡೆ ಕೇವಲ 18ಕಿ.ಮೀ ಅಂತರವಿದ್ದು 30ರೂ ಬಸ್ ದರ ನಿಗಧಿಯಾಗಿರುವುರಿಂದ ಇದನ್ನು ಪರಿಶೀಲಿಸಿ ದರ ಕಡಿತಗೂಳಿಸಿ ಈ ಭಾಗದ ಜನತೆಗೆ ಅನುಕೂಲಕಲ್ಪಿಸವಂತೆ ಕೋರಿದರು.

ಗ್ರಾಮಸ್ಥರಿಂದ ಮನವಿಗಳ ಸರಮಾಲೆ: ಈ ಭಾಗದ ಜನತೆಗೆ ಮನೆ ನಿರ್ಮಾಣ ಮಾಡಲು ಮರಳಿನ ಅವಶ್ಯಕತೆ ಹೆಚ್ಚಿದ್ದು, ನಮಗೆ ಅವಶ್ಯಕತೆಗೆ ಅನುಗುಣವಾಗಿ ಮರಳನ್ನು ತೆಗೆಯಲು ಅರಣ್ಯಾಧಿಕಾರಿಗಳು ಅನುಮತಿ ನೀಡದೆ ನಮಗೆ ಕಿರುಕುಳ ನೀಡುತ್ತಿದ್ದಾರೆ. ಅರಣ್ಯಾ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಚಿವರ ಬಳಿ ಮನವಿ ಮಾಡಿದರು.

ಈ ಬಾಗದ ಜನರು ಬಹುತೇಕ ಪಾಲು ಕೃಷಿಯನ್ನು ಅವಲಂಬಿಸಿದ್ದು ಕೃಷಿಗೆ ಬೇಕಾದ ಪರಿಕರ ಮತ್ತು ಮಾರ್ಗದರ್ಶನ ಪಡೆಯಲು ಹನೂರು, ರಾಮಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಹೆಚ್ಚಿನ ಜನರಿಗೆ ರೈತ ಸಂಪರ್ಕ ಕೇಂದ್ರವಿದೆ ಎಂಬ ಬಗ್ಗೆ  ಮಾಹಿತಿಯೇ ಇಲ್ಲ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳನ್ನ ಕರೆದು ಮುಂದಿನ ವಾರದಲ್ಲಿ  ಗ್ರಾಮದಲ್ಲಿ ರೈತ ಆಧಾಲತ್ ಹಮ್ಮಿಕೂಳ್ಳುವುದರ ಮುಖಾಂತರ ಈ ಭಾಗದ ರೈತರಿಗೆ ಬೇಕಾದ ಕೃಷಿ ಪರಿಕರ ಮತ್ತು ಮಾರ್ಗದರ್ಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು . 

ಹನೂರಿನಲ್ಲಿ ಶೀಘ್ರದಲ್ಲಿಯೇ ತಾಲ್ಲೂಕು ಸಂಬಂಧಿಸಿದ ಕಚೇರಿ ಆರಂಭ:  ಹನೂರು ಪಟ್ಟಣದಲ್ಲಿ ಶೀಘ್ರದಲ್ಲಿ ತಾಲ್ಲೂಕು ಸಂಬಂಧಿಸಿದ ಕಚೇರಿಗಳನ್ನು ತೆರೆಯದೆ ಇರುವುದರಿಂದ ಗಡಿಹಂಚಿನ ಗ್ರಾಮಸ್ಥರು ಇಂದಿಗೂ ಸಹ ಹಳೆಯ ತಾಲ್ಲೂಕು ಕೂಳ್ಳೇಗಾಲಕ್ಕೆ ಅಲೆಯುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿ ಹನೂರಿನಲ್ಲಿ ತಾಲ್ಲೂಕಿಗೆ ಸೇರಿದ ಎಲ್ಲಾ ಕಚೇರಿಗಳನ್ನು ತೆರೆಯಲು ಸಾರ್ವಜನಿಕರು ಮತ್ತು ಮಾದ್ಯಮದವರು  ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಅವರು ಕಂದಾಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಕಚೇರಿಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷೆ ಮರಗದಮಣಿ, ಜಿಪಂ ಸದಸ್ಯೆ ಮಂಜುಳಾರಂಗಸ್ವಾಮಿ, ಗ್ರಾಪಂ ಅದ್ಯಕ್ಷ ಮುರುಗನ್, ಜಿಲ್ಲಾಧಿಕಾರಿ ಬಿ.ಬಿ ಕಾವೇರಿ, ಸಿ.ಇ ಓ ಸೂರ್ಯನಾರಾಯಣ್,ಕೂಳ್ಲೇಗಾಲ ಉಪವಿಭಾಗದಿಕಾರಿ ನಿಖಿತ ಚಿನ್ನಸ್ವಾಮಿ, ತಹಿಸೀಲ್ದಾರ್ ಕುನಾಲ್ ಡಿಡಿಪಿಐ ಮಂಜುನಾಥ್, ಬಿಇಒ ಸ್ವಾಮಿ, ಪ್ರಭಾರ ಇಒ ಶಶಿದರ್, ಬಿಆರ್‍ಸಿ ಕಾರ್ತಿಕ್ ಪಿಡಿಒ ಕಿರಣ್  ಸಿಆರ್‍ಪಿ ಮಹೇದ್ರ, ಸೇರಿದಂತೆ  ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News