10 ಏಜನ್ಸಿಗಳಿಗೆ ಮಾತ್ರ ಫೋನ್ ಕರೆ ಕದ್ದಾಲಿಸುವ ಅಧಿಕಾರ: ಲೋಕಸಭೆಗೆ ತಿಳಿಸಿದ ಸರಕಾರ

Update: 2019-11-20 10:27 GMT

ಹೊಸದಿಲ್ಲಿ: ಕೇಂದ್ರ ಗೃಹ ಕಾರ್ಯದರ್ಶಿಗಳ ಪೂರ್ವಾನುಮತಿಯೊಂದಿಗೆ ಸಿಬಿಐ, ಜಾರಿ ನಿರ್ದೇಶನಾಲಯ, ಇಂಟಲಿಜೆನ್ಸ್ ಬ್ಯುರೋ, ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋ, ಕೇಂದ್ರ ನೇರ ತೆರಿಗೆಗಳ ಮಂಡಳಿ, ಡಿಆರ್ ಐ, ಎನ್‍ಐಎ, ರಾ, ಸಿಗ್ನಲ್ ಇಂಟಲಿಜೆನ್ಸ್ ನಿರ್ದೇಶನಾಲಯ ಹಾಗೂ ದಿಲ್ಲಿ ಪೊಲೀಸ್ ಆಯುಕ್ತರು ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸುವ ಅಧಿಕಾರ ಹೊಂದಿದ್ದಾರೆ ಎಂದು ಸರಕಾರ ಲೋಕಸಭೆಗೆ ತಿಳಿಸಿದೆ.

"ಐಟಿ ಕಾಯಿದೆ 2000ರ ಸೆಕ್ಷನ್ 69 ಅನ್ವಯ ಕೇಂದ್ರ ಸರಕಾರ ಯಾ ರಾಜ್ಯ ಸರಕಾರಗಳು ದೇಶದ ಸಾರ್ವಭೌಮತ್ವ ಹಾಗೂ ಐಕ್ಯತೆಯ ದೃಷ್ಟಿಯಿಂದ ಯಾವುದೇ ಕಂಪ್ಯೂಟರಿನಲ್ಲಿ ಸಂಗ್ರಹವಾಗಿರುವ ಅಥವಾ ಅದರ ಮೂಲಕ ಕಳುಹಿಸಲಾಗಿರುವ, ಪಡೆಯಲಾಗಿರುವ ಅಥವಾ ಸೃಷ್ಟಿಸಲಾಗಿರುವ ಮಾಹಿತಿಯನ್ನು ಪಡೆಯಬಹುದಾಗಿದೆ,'' ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹೇಳಿದರು.

ವಾಟ್ಸ್ ಆ್ಯಪ್ ಕರೆ ಹಾಗೂ ಸಂದೇಶಗಳ ಮೇಲೆ ಗೂಢಚರ್ಯೆ ನಡೆಸುವ ಕುರಿತಾದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ಸರಕಾರ ಯಾವುದೇ ಏಜನ್ಸಿಗೆ ಕರೆಗಳು ಅಥವ ಸಂದೇಶಗಳ ಮೇಲೆ ನಿಗಾ ಇಡಲು ಹೇಳಿಲ್ಲ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News