ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ

Update: 2019-11-20 18:27 GMT

ಚಿಕ್ಕಮಗಳೂರು, ನ.20: ನಿವೇಶನ ಭೂಮಿಗೆ ದಾರಿ ನಿರ್ಮಿಸಿಕೊಡುವುದು, ನಿವೇಶನಕ್ಕೆ ಭೂಮಿ ಉಳಿಸುವುದು ಮತ್ತು ಅಕ್ರಮ ಒತ್ತುವರಿ ತಡೆಯುವಂತೆ ಆಗ್ರಹಿಸಿ ಮೂಡಿಗೆರೆ ತಾಲೂಕು ವಸತಿಗಾಗಿ ಹೋರಾಟ ವೇದಿಕೆ ಕಾರ್ಯಕರ್ತರು ನಗರದ ಆಜಾದ್ ಮೈದಾನದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಳೇ ಮೂಡಿಗೆರೆ ಗ್ರಾ.ಪಂ. ನಿವೇಶನಕ್ಕೆ ಮಂಜೂರಾದ ಭೂಮಿಗೆ ರಸ್ತೆ ನಿರ್ಮಿಸಿಕೊಡುವುದು, ಕಮ್ಮರಗೋಡು ಸರ್ವೇನಂ. 127ರಲ್ಲಿ ಸರಕಾರಿ ಭೂಮಿ 4 ಎಕರೆ 29 ಗುಂಟೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ನಿವೇಶನಕ್ಕೆ ಕಾಯ್ದಿರಿಸುವುದು, ಜಿಲ್ಲೆಯ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವುದರೊಂದಿಗೆ ಮಳೆ ನಿರಾಶ್ರಿತರಿಗೆ ಸೂಕ್ತ ಪರಿಹಾರ ಮತ್ತು ಭೂಮಿ ಕಲ್ಪಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

ಈ ಧರಣಿಯಲ್ಲಿವಸತಿಗಾಗಿ ಹೋರಾಟ ವೇದಿಕೆಯ ಎಸ್.ಶೇಖರ್, ಶಿವಪ್ಪ, ರವಿ, ರಾಜೇಶ್‍ಕುಮಾರ್, ಮಂಜುಳ, ನಾಗಮ್ಮ ರೋಜಿ, ಚೆಲ್ಲಮ್ಮ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News