ಹಾಲು ಉತ್ಪಾದಕರಿಗೆ ತೊಂದರೆಯಾದರೆ ಸರಕಾರದ ವಿರುದ್ಧವೇ ಹೋರಾಟ: ಸಚಿವ ಎಚ್.ನಾಗೇಶ್

Update: 2019-11-21 14:40 GMT

ಮೈಸೂರು, ನ.21: ಹಾಲು ಉತ್ಪಾದಕರಿಗೆ ತೊಂದರೆಯಾಗುವ ಯಾವುದೇ ತೀರ್ಮಾನವನ್ನು ಸರ್ಕಾರ ಕೈಗೊಂಡರೆ ಅದರ ವಿರುದ್ಧ ಹೋರಾಡಲು ಸಿದ್ಧ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ನಗರದ ಕಡಕೊಳ ಬಳಿ ಇರುವ ಕ.ವಿ.ಮಂ.ಇಂ. ಸಂಘದ ಸಂಕೀರ್ಣದ ಸೂರ್ಯರಾವ್ ಸಭಾಂಗಣದಲ್ಲಿ ಗುರುವಾರ  ಆಯೋಜಿಸಿದ್ದ ಕ.ವಿ.ಮಂ.ಇಂ. ಸಂಘದ ಸದಸ್ಯರೂ ಆದ ಅಬಕಾರಿ ಸಚಿವ ಎಚ್.ನಾಗೇಶ್ ಅವರಿಗೆ ಸನ್ಮಾನ, 41ನೇ ಸರ್ವಸದಸ್ಯರ ಸಭೆ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆ, ದಟ್ಟಗಳ್ಳಿ ನಿವೇಶನದಲ್ಲಿ ಉದ್ದೇಶಿತ ಭವನಕ್ಕೆ ಶಿಲಾನ್ಯಾಸ   ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೆ ಈಗ ವಿದೇಶದಿಂದ 8 ರೂ.ಗಳಿಗೆ ಸಿಗುವ ಹಾಲನ್ನು ಆಮದು ಮಾಡಿಕೊಳ್ಳುವ ಚರ್ಚೆ ನಡೆಯುತ್ತಿದ್ದೆ. ಅದಕ್ಕೆ ನನ್ನ ಸಂಪೂರ್ಣ ವಿರೋಧವಿದ್ದು, ನಾನು ರೈತರ ಪರ ಇವರಿಗೆ ತೊಂದರೆಯಾಗುತ್ತದೆ ಎಂದರೆ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.

ಹಾಲನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಅವರಿಗೆ ತೊಂದರೆಯಾಗುವ ಯಾವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಬಾರದು ಎಂದು ಹೇಳಿದರು.

ಇಂದು ಸಾಕಷ್ಟು ಕೈಗಾರಿಕೆಗಳು ಜಿಎಸ್ಟಿಯಿಂದ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಕೈಗಾರಿಕೆಗಳು ಉಳಿದರೆ ಉದ್ಯೋಗ ನೀಡಲು ಸಾಧ್ಯ ಹಾಗಾಗಿ ಜಿಎಸ್ಟಿಗೆ ತಿದ್ದುಪಡಿ ತರುವ ಅಗತ್ಯವಿದ್ದು ಕೇಂದ್ರಕ್ಕೆ ಮನವಿ ಮಾಡುವುದಾಗಿ ಸಚಿವ ಎಚ್.ನಾಗೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News