ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಕೇಂದ್ರದ ಮೇಲೆ ಜಯಾ ಬಚ್ಚನ್ ವಾಗ್ದಾಳಿ

Update: 2019-11-22 03:43 GMT

ಹೊಸದಿಲ್ಲಿ, ನ.22: ರಾಜ್ಯಸಭೆಯಲ್ಲಿ ಗುರುವಾರ ನಡೆದ ಮಾಲಿನ್ಯ ಕುರಿತ ಚರ್ಚೆ ವೇಳೆ ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು. ದೇಶದಲ್ಲಿ ಈಗಾಗಲೇ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಕೇಂದ್ರ ಸರ್ಕಾರ ಉತ್ತರ ಭಾರತದಲ್ಲಿ ಮಾಲಿನ್ಯಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಆಗ್ರಹಿಸಿದರು.

"ಪರಿಸರಾತ್ಮಕ ತುರ್ತು ಪರಿಸ್ಥಿತಿ... ದಯವಿಟ್ಟು ಘೋಷಿಸಿ.. ಈಗಾಗಲೇ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಆದರೆ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ದಯವಿಟ್ಟು ಘೋಷಿಸಿ ಹಾಗೂ ಮಾಲಿನ್ಯಕ್ಕೆ ಕಾರಣವಾಗುವ ಜನರನ್ನು ಶಿಕ್ಷಿಸಿ, ರೈತರ ಮೇಲೆ ಗೂಬೆ ಕೂರಿಸಬೇಡಿ" ಎಂದು ಸದನಲ್ಲಿ ಮನವಿ ಮಾಡಿದರು.

ಮಾಲಿನ್ಯ ಕುರಿತ ಚರ್ಚೆಯನ್ನು ತಪ್ಪಿಸಿಕೊಂಡ ಸಂಸದರ ಫೋಟೊಗಳನ್ನೂ ಬಚ್ಚನ್ ಕ್ಲಿಕ್ಕಿಸಿದರು.
"ಸದನದಲ್ಲಿರುವ ಹಾಜರಾತಿ, ಈ ಪ್ರಕರಣವನ್ನು ನಾವು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತೋರಿಸುತ್ತದೆ.. ಇಂಥ ಗಂಭೀರ ವಿಷಯಕ್ಕೆ.. ಅದ್ಭುತ ಪಾಲ್ಗೊಳ್ಳುವಿಕೆ" ಎಂದು ರಾಜ್ಯಸಭೆಯ ಖಾಲಿ ಕುರ್ಚಿಗಳತ್ತ ತೋರಿಸಿದ ಬಚ್ಚನ್ ಲೇವಡಿ ಮಾಡಿದರು.

ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಲಿನ್ಯವನ್ನು ತಡೆಯಲು ಸಮಗ್ರ ವಾಯು ಯೋಜನೆ ರೂಪಿಸುವುದಾಗಿ ಚರ್ಚೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News