ಶ್ವೇತಭವನದ ಗೌರವ ಪಡೆದ ವಿಶೇಷ ನಾಯಿ !

Update: 2019-11-26 06:39 GMT

ವಾಷಿಂಗ್ಟನ್, ನ.26: ಐಸಿಸ್ ಮುಖಂಡ ಅಬೂಬಕರ್ ಅಲ್ ಬಗ್ದಾದಿಯ ಹತ್ಯೆ ಕಾರ್ಯಾಚರಣೆಯಲ್ಲಿ ಅಮೆರಿಕ ಸೈನಿಕರಿಗೆ ನೆರವಾದ ಕೊನನ್ ಶ್ವಾನಕ್ಕೆ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ವಿಶೇಷ ಗೌರವ ನೀಡಿದರು.

ಕುಖ್ಯಾತ ಉಗ್ರ ಬಗ್ದಾದಿ, ಕಳೆದ ಅಕ್ಟೋಬರ್‌ನಲ್ಲಿ ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕದ ವಿಶೇಷ ಪಡೆ ಮತ್ತು ಸೇನಾ ಕರ್ತವ್ಯದಲ್ಲಿದ್ದ ಈ ಶ್ವಾನದ ಕಾರ್ಯಾಚರಣೆ ಬಳಿಕ ಆತ್ಮಹತ್ಯೆ ಬಾಂಬ್ ಸ್ಫೋಟದಿಂದ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ವಿಶೇಷ ಶ್ವಾನವನ್ನು ಶ್ವೇತಭವನಕ್ಕೆ ಕರೆತಂದು, ಓವಲ್ ಕಚೇರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿಸಲಾಯಿತು.

ಬಳಿಕ ಈ ಶ್ವಾನ, ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಜತೆಗೆ ರೋಸ್ ಗಾರ್ಡನ್‌ನಲ್ಲಿ ಕಾಣಿಸಿಕೊಂಡಿತ್ತು. ಕಾರ್ಯಾಚರಣೆ ಕೈಗೊಂಡ ವಿಶೇಷ ಪಡೆ ಕೂಡಾ ಟ್ರಂಪ್ ಅವರನ್ನು ಭೇಟಿ ಮಾಡಿತು. ಆದರೆ ಈ ಸೈನಿಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಸೈನಿಕರನ್ನು ಭೇಟಿ ಮಾಡಿ, ಶ್ವಾನಕ್ಕೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದ್ದಾಗಿ ಟ್ರಂಪ್ ತಿಳಿಸಿದರು. "ಈ ಶ್ವಾನ ನಂಬಲಸಾಧ್ಯವಾದದ್ದು; ಅತ್ಯಂತ ಬುದ್ಧಿವಂತ ಹಾಗೂ ಸ್ಮಾರ್ಟ್" ಎಂದು ಟ್ರಂಪ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News