ವರ್ಜೀನಿಯಾ ವಿವಿ | 25 ಪ್ರತಿಭಟನಾಕಾರರ ಬಂಧನ
Update: 2024-05-05 22:39 IST
ಸಾಂದರ್ಭಿಕ ಚಿತ್ರ | Photo - AP
ನ್ಯೂಯಾರ್ಕ್ : ಅಮೆರಿಕದ ವರ್ಜೀನಿಯಾ ವಿವಿಯ ಕ್ಯಾಂಪಸ್‍ಲ್ಲಿ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಸ್ಥಾಪಿಸಿದ್ದ ಟೆಂಟ್‍ಗಳನ್ನು ತೆರವುಗೊಳಿಸಲು ಅಡ್ಡಿಪಡಿಸಿದ 25 ಪ್ರತಿಭಟನಾಕಾರರನ್ನು ಶನಿವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿವಿಯ ಆವರಣದಲ್ಲಿ ಕಾನೂನುಬಾಹಿರವಾಗಿ ಸಭೆ ಸೇರಿದ್ದ ಪ್ರತಿಭಟನಾಕಾರರು ಘೋಷಣೆ ಕೂಗುವುದನ್ನು ಮುಂದುವರಿಸಿದಾಗ ಅವರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದ್ದು ವಿವಿಯ ಕ್ಯಾಂಪಸ್‍ನಲ್ಲಿ ಅಕ್ರಮವಾಗಿ ಸ್ಥಾಪಿಸಿದ್ದ ಟೆಂಟ್‍ಗಳನ್ನು ತೆರವುಗೊಳಿಸಲು ನಿರಾಕರಿಸಿದ್ದಾರೆ. ಟೆಂಟ್ ತೆರವುಗೊಳಿಸಲು ಪೊಲೀಸರು ಮುಂದಾದಾಗ ತಡೆದ 25 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.