ಪಡಿತರ ಸಮಸ್ಯೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ಸೋದರ ಪ್ರಹ್ಲಾದ್ ಮೋದಿ

Update: 2019-11-29 07:17 GMT

ಹೊಸದಿಲ್ಲಿ :  ಪಡಿತರ ವಿತರಣಾ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ವಿರೋಧಿಸಿ  ಡಿಸೆಂಬರ್ 2ರಿಂದ 11 ದಿನಗಳ ಕಾಲ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ  ಮಾಲಕರ ಫೆಡರೇಶನ್ ನಡೆಸಲಿರುವ ಪ್ರತಿಭಟನೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸೋದರ ಪ್ರಹ್ಲಾದ್ ದಾಮೋದರ ದಾಸ್ ಮೋದಿ ಭಾಗವಹಿಸಲಿದ್ದಾರೆ. ಪ್ರಹ್ಲಾದ್ ಮೋದಿ ಈ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಸ್ವಂಭರ್ ಬಸು  ತಿಳಿಸಿದರು. ಪತ್ರಿಕಾಗೋಷ್ಠಿಯುಲ್ಲಿ  ಪ್ರಹ್ಲಾದ್ ಮೋದಿ ಹಾಜರಿರಲಿಲ್ಲ. ಅವರಿಗೆ ಅಸೌಖ್ಯವಿದ್ದುದರಿಂದ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿಲ್ಲ ಎಂದು ಬಸು ತಿಳಿಸಿದ್ದಾರೆ.  ಆದರೆ ಅವರು ಡಿಸೆಂಬರ್ 2ರಿಂದ 13ರ ತನಕ ಜಂತರ್ ಮಂತರ್ ನಲ್ಲಿರುವ ಧರಣಿಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಪ್ರಹ್ಲಾದ್ ಮೋದಿ ಫೆಡರೇಶನ್ 2001ರಲ್ಲಿ ಆರಂಭಗೊಂಡಾಗಿನಿಂದ ಅದರ ಭಾಗವಾಗಿದ್ದಾರೆ. ಅವರು ಗುಜರಾತ್ ನ್ಯಾಯಬೆಲೆ ಅಂಗಡಿ ಮಾಲಕರ ಹಾಗೂ ಸೀಮೆಎಣ್ಣೆ ಲೈಸನ್ಸುದಾರರ ಸಂಘದ ಅಧ್ಯಕ್ಷರೂ  ಆಗಿದ್ದಾರೆ. ಅವರು ಅಹ್ಮದಾಬಾದ್‍ನಲ್ಲಿ ಹಲವು ವರ್ಷಗಳ ಕಾಲ ನ್ಯಾಯಬೆಲೆ ಅಂಗಡಿ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News