ಈ ದಿನ

Update: 2023-06-30 05:28 GMT

1640: ಸುಮಾರು 60 ವರ್ಷಗಳ ಸ್ಪೇನ್ ಆಳ್ವಿಕೆಯಿಂದ ಮುಕ್ತಗೊಂಡು ಪೋರ್ಚುಗಲ್ ತನ್ನ ಸ್ವಾತಂತ್ರವನ್ನು ಮರಳಿ ಪಡೆಯಿತು.
1963: ಭಾರತದ 16ನೇ ರಾಜ್ಯವಾಗಿ ನಯನ ಮನೋಹರ ಈಶಾನ್ಯ ಭಾಗದ ಪ್ರದೇಶ ನಾಗಾಲ್ಯಾಂಡ್ ಸೇರ್ಪಡೆಯಾಯಿತು. 1816ರಲ್ಲಿ ಸದ್ಯದ ಅಸ್ಸಾಂ ಮತ್ತು ನಾಗಾಲ್ಯಾಂಡ್‌ನ ಭಾಗಗಳು ಬರ್ಮಿಯನ್ನರ ಅಧೀನಕ್ಕೆ ಒಳಪಟ್ಟಿದ್ದವು. 10 ವರ್ಷಗಳ ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಈ ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ನಾಗಾಗಳೆಂಬ ಬುಡಕಟ್ಟು ಜನಾಂಗ ಇಲ್ಲಿ ಹೆಚ್ಚಾಗಿ ವಾಸಿಸುತ್ತದೆ.
1965: ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಸ್ತಿತ್ವಕ್ಕೆ ಬಂದಿತು.
1974: ವರ್ಜೀನಿಯಾದ ಅಪ್ಪರ್‌ವಿಲ್ಲೆ ಪ್ರದೇಶದಲ್ಲಿ ಬೋಯಿಂಗ್ 727 ವಿಮಾನ ಪತನಗೊಂಡು 92 ಜನರು ಮೃತಪಟ್ಟರು.
1976: ಅಂಗೋಲಾ ವಿಶ್ವಸಂಸ್ಥೆಗೆ ಸೇರ್ಪಡೆಗೊಂಡಿತು.
1988: ಏಡ್ಸ್ ಕಾಯಿಲೆಯ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಕಾಯಿಲೆಯಿಂದ ಮೃತಪಟ್ಟವರ ಶೋಕಾಚರಣೆಗಾಗಿ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳಲ್ಲಿ 1988ರ ಡಿ.1ರಿಂದ ಪ್ರತೀವರ್ಷ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಎಲ್ಲ ಸರಕಾರಿ ಆರೋಗ್ಯ ಇಲಾಖೆಗಳು, ಸರಕಾರೇತರ ಸಂಸ್ಥೆಗಳು ವಿಶ್ವಾದ್ಯಂತ ಏಡ್ಸ್ ಕುರಿತು ತಿಳುವಳಿಕೆ ಮೂಡಿಸಲು ಮತ್ತು ತಡೆಗಟ್ಟುವ, ನಿಯಂತ್ರಿಸುವ ಕ್ರಮಗಳ ಕುರಿತು ಕಾರ್ಯಕ್ರಮ, ಉಪನ್ಯಾಸ ನಡೆಸುತ್ತವೆ.
1933: 
ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗೂ ಸೃಜನಶೀಲ ನಿರ್ದೇಶಕ, ಚಿತ್ರಬ್ರಹ್ಮ ಎಂದೇ ಖ್ಯಾತರಾದ ಪುಟ್ಟಣ್ಣ ಕಣಗಾಲ್ ಜನ್ಮದಿನ. 1980: 
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಜನ್ಮದಿನ. 1990: ಭಾರತೀಯ ರಾಯಭಾರಿ, ರಾಜಕಾರಣಿ ವಿಜಯಲಕ್ಷ್ಮೀ ಪಂಡಿತ್ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ