ಈ ದಿನ

Update: 2023-06-30 05:28 GMT

1883: ಅಮೆರಿಕದ ನ್ಯೂಜೆರ್ಸಿಯಲ್ಲಿ ಪ್ರಥಮ ಬಾರಿಗೆ ಥಾಮಸ್ ಆಲ್ವಾ ಎಡಿಸನ್, ಮೇಲ್ತಂತಿಗಳನ್ನು ಬಳಸಿಕೊಂಡು ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನು ಆರಂಭಿಸಿದರು.

1893: ಖ್ಯಾತ ನಾಟಕಕಾರ ನಾರ್ವೆಯ ಹೆನ್ರಿಕ್ ಇಬ್ಸೆನ್‌ರ ನಾಟಕ ‘ದ ಮಾಸ್ಟರ್ ಬಿಲ್ಡರ್’ ಜರ್ಮನಿಯ ಬರ್ಲಿನ್‌ನಲ್ಲಿ ತನ್ನ ಮೊದಲ ಪ್ರದರ್ಶನವನ್ನು ಕಂಡಿತು.

1942: ಎರಡನೇ ವಿಶ್ವ ಮಹಾಯುದ್ಧದ ಭಾಗವಾಗಿ ಜಪಾನ್ ಸೇನೆಯು ಬರ್ಮಾ ಮೇಲೆ ದಾಳಿ ಮಾಡಿತು.

1966: ಭಾರತದ 4ನೇ ಪ್ರಧಾನಮಂತ್ರಿಯಾಗಿ ಇಂದಿರಾಗಾಂಧಿ ಆಯ್ಕೆಯಾದರು.

1984: ಹೀರೋ ಹೋಂಡ ಸಂಸ್ಥೆಯು ಆರಂಭವಾಯಿತು.

2006: ನಾಸಾದಿಂದ ‘ನ್ಯೂ ಹಾರಿರೆನ್ಸ್’ ಬಾಹ್ಯಾಕಾಶ ಕಾರ್ಯಕ್ರಮ ಆರಂಭವಾಯಿತು. ಇದು ಫ್ಲೂಟೊ ಗ್ರಹಕ್ಕೆ ಯಾನ ಆರಂಭಿಸಿದ ಪ್ರಥಮ ಕಾರ್ಯಕ್ರಮವಾಗಿದೆ.

2007: ಆರ್ಮೇನಿಯನ್ ಪತ್ರಕರ್ತ ಹ್ರಾಂಟ್ ಡಿಂಕ್ ತನ್ನ ದಿನಪತ್ರಿಕೆಯ ಕಚೇರಿ ಎದುರು ಟರ್ಕಿಶ್ ಉಗ್ರ ರಾಷ್ಟ್ರೀಯವಾದಿ ಒಗ್ಯುನ್ ಸಾಮಸ್ಟ್‌ನಿಂದ ಹತ್ಯೆಗೈಯಲ್ಪಟ್ಟರು.

2013: ನಾಸಾದ ಕ್ಯೂರಿಯಾಸಿಟಿ ರೋವರ್‌ನಿಂದ ಮಂಗಳನ ಅಂಗಳದಲ್ಲಿ ಕ್ಯಾಲ್ಸಿಯಂ ನಿಕ್ಷೇಪಗಳ ಸಂಶೋಧನೆ.

2013: ವಿಶ್ವದ ಅತ್ಯಂತ ಹೆಚ್ಚಿನ ಜನ ಸಮೂಹ ಕೂಡಿದ್ದ ದಿನ. ಭಾರತದ ಕುಂಭಮೇಳದಲ್ಲಿ 3 ಕೋಟಿ ಜನರು ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ.

2017: ಇರಾನ್‌ನ ಟೆಹರಾನ್‌ನಲ್ಲಿ ಎತ್ತರದ ಕಟ್ಟಡವೊಂದು ಕುಸಿದು ಅಗ್ನಿಶಾಮಕದಳದ 20 ಸಿಬ್ಬಂದಿ ಸಾವಿಗೀಡಾದರು.

1935: ಬಂಗಾಳಿ ನಟ, ರಂಗಭೂಮಿ ಕಲಾವಿದ ಸೌಮಿತ್ರ ಚಟರ್ಜಿ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ