ಗಣರಾಜ್ಯೋತ್ಸವ ದಿನ

Update: 2023-06-30 05:27 GMT

1926: ಜಾನ್ ಲೋಗಿ ಬೇರ್ಡ್ ಅವರು ಮೊದಲ ಬಾರಿ ದೂರದರ್ಶನದ ಪ್ರದರ್ಶನ ಮಾಡಿದರು.

1930: ಭಾರತದಲ್ಲಿ ಜ.26ರ ದಿನವನ್ನು ಪ್ರತಿಯೊಬ್ಬ ನಾಗರಿಕನೂ ಗಣರಾಜ್ಯೋತ್ಸವ ದಿನ ಎಂದು ಗುರುತಿಸುತ್ತಾರೆ. 1950ರ ಪ್ರಥಮ ಗಣರಾಜ್ಯೋತ್ಸವ ದಿನಕ್ಕಿಂತ ಸರಿಯಾಗಿ 20 ವರ್ಷಗಳ ಹಿಂದೆ ಅಂದರೆ 1930 ಜ.26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಸಂಪೂರ್ಣ ಸ್ವಾತಂತ್ರ ದಿನವೆಂದು ಘೋಷಿಸಿತ್ತು. ಅಂದಿನಿಂದ ಸ್ವಾತಂತ್ರವನ್ನು ಪಡೆಯಲೇಬೇಕೆಂಬ ಉತ್ಕಟ ಆಸೆ ಭಾರತೀಯರಲ್ಲಿ ಜನ್ಮ ತಾಳಿತು. 1934: ನಾಝಿ ಜರ್ಮನಿ ಹಾಗೂ ಪೋಲ್ಯಾಂಡ್ 10 ವರ್ಷಗಳ ಕಾಲ ಪರಸ್ಪರ ಆಕ್ರಮಣ ಮಾಡದಿರಲು ಒಪ್ಪಂದ ಮಾಡಿಕೊಂಡವು.

1950: ಭಾರತ ಸಂವಿಧಾನವನ್ನು ಅಧಿಕೃವಾಗಿ ಅಳವಡಿಸಿಕೊಂಡಿತು. ಭಾರತದ ಪ್ರಥಮ ರಾಷ್ಟ್ರಪತಿಯಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್ ಆಯ್ಕೆಯಾದರು. ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ಈ ದಿನವನ್ನು ಪ್ರತೀವರ್ಷ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.

2001: ಗುಜರಾತ್ ಕಚ್ ಜಿಲ್ಲೆಯ ಸುತ್ತಮುತ್ತ ಸಂಭವಿಸಿದ ಪ್ರಬಲ ಭೂಕಂಪದಲ್ಲಿ(ಭುಜ್ ಭೂಕಂಪ ಎಂದೂ ಕರೆಯಲಾಗಿದೆ) ಸುಮಾರು 13,000ರಿಂದ 20,000 ಜನರು ಸಾವನ್ನಪ್ಪಿದ ವರದಿಯಾಗಿದೆ, ದೇಶ 52ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಸಂದರ್ಭ ಈ ಮಹಾ ದುರಂತ ಭಾರೀ ದುಃಖ ಕ್ಕೆ ಕಾರಣವಾಯಿತು. 7.7 ರಿಕ್ಟರ್ ತೀವ್ರತೆಯಿದ್ದ ಕಂಪನದಲ್ಲಿ ಸುಮಾರು 1,66,000 ಜನ ಗಾಯಗೊಂಡ ವರದಿಯಾಗಿದೆ.

2015: ಸ್ಪೇನ್‌ನ ಅಲ್ಬಾಸೆಟೆಯಲ್ಲಿರುವ ವಾಯುನೆಲೆಯಲ್ಲಿ ವಿಮಾನ ಅಪಘಾತಕ್ಕೀಡಾದ ಪರಿಣಾಮ 11 ಜನರು ಮೃತಪಟ್ಟರು ಮತ್ತು 21 ಮಂದಿ ಗಾಯಗೊಂಡರು.

1968: ತೆಲುಗು ನಟ ರವಿ ತೇಜ ಜನ್ಮದಿನ.

1991: ಭಾರತದ ಕ್ರಿಕೆಟಿಗ ವಿಜಯ್ ಶಂಕರ್ ಜನ್ಮದಿನ.

1831: ಭಾರತದ ಸ್ವಾತಂತ್ರ ಹೋರಾಟಗಾರ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ