ಟೋನಿ ಜೋಸೆಫ್ ಕೃತಿಗೆ ‘ಶಕ್ತಿ ಭಟ್’ ಪ್ರಥಮ ಪುಸ್ತಕ ಬಹುಮಾನಕ್ಕೆ ಆಯ್ಕೆ

Update: 2019-12-02 19:08 GMT
Photo: Facebook/Tony Joseph

ಹೊಸದಿಲ್ಲಿ, ಡಿ. 2: ಲೇಖಕ ಟೋನಿ ಜೋಸೆಫ್ ಅವರ ಕೃತಿ 'ಅರ್ಲಿ ಇಂಡಿಯನ್ಸ್: ದಿ ಸ್ಟೋರಿ ಆಫ್ ಅವರ್ ಆ್ಯನ್ಸೆಸ್ಟರ್ಸ್‌ ಆ್ಯಂಡ್ ವೇರ್ ವಿ ಕೇಮ್ ಫ್ರಮ್' 2019ನೇ ಸಾಲಿನ ಶಕ್ತಿ ಭಟ್ ಪ್ರಥಮ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಶಕ್ತಿ ಭಟ್ ಪ್ರಥಮ ಪುಸ್ತಕ ಬಹುಮಾನ 2008ರಲ್ಲಿ ಅಸ್ತಿತ್ವಕ್ಕೆ ಬಂತು. ಈ ಪುಸ್ತಕ ಬಹುಮಾನ 2 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು ಒಳಗೊಂಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜೋಸೆಫ್, ''ನನ್ನ ಪುಸ್ತಕವನ್ನು ಬಹುಮಾನಕ್ಕೆ ಆಯ್ಕೆ ಮಾಡಿರುವ ಶಕ್ತಿ ಭಟ್ ಪ್ರತಿಷ್ಠಾನ ಹಾಗೂ ಜ್ಯೂರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News