ಉತ್ತರಪ್ರದೇಶ: ವಿವಾಹ ನಿರಾಕರಿಸಿ ಶಿಕ್ಷಣದತ್ತ ಹೆಜ್ಜೆ ಇರಿಸಿದ ಬಾಲಕಿ

Update: 2019-12-02 19:13 GMT
Photo: PTI

ಫತೇಪುರ (ಉತ್ತರಪ್ರದೇಶ), ನ. 2: ಉತ್ತರಪ್ರದೇಶದ 11 ವರ್ಷದ ಬಾಲಕಿಯೋರ್ವಳು ವಿವಾಹವಾಗಲು ನಿರಾಕರಿಸಿದ್ದಾಳೆ ಹಾಗೂ ಕಲಿಯುವ ಇಂಗಿತ ವ್ಯಕ್ತಪಡಿಸಿದ್ದಾಳೆ. ಅದಕ್ಕಾಗಿ ಪೊಲೀಸರ ನರೆವು ಕೋರಿದ್ದಾಳೆ.

ಬಾಲಕಿ ಲಕ್ಷ್ಮೀ ದೇವಿಯ ಧೈರ್ಯಕ್ಕೆ ಮಕ್ಕಳ ರಕ್ಷಣಾ ಆಯೋಗ, ಮಹಿಳಾ ಆಯೋಗ ಹಾಗೂ ಸಮಾಜ ಸೇವೆ ಸಂಘಟನೆಗಳು ಪ್ರಶಂಸೆ ವ್ಯಕ್ತಪಡಿಸಿವೆ.

‘‘ಇಂತಹ ಹೆಣ್ಣು ಮಕ್ಕಳಿಗೆ ಉತ್ತೇಜನ ನೀಡಬೇಕಾದ ಅಗತ್ಯ ಇದೆ. ಈ ಬಾಲಕಿ ಭವಿಷ್ಯದ ಮಾದರಿ. ನಾನು ಆಕೆಯ ಧೈರ್ಯಕ್ಕೆ ಸೆಲ್ಯುಟ್ ಮಾಡುತ್ತೇನೆ’’ ಎಂದು ಉತ್ತರಪ್ರದೇಶದ ಮಕ್ಕಳ ಹಕ್ಕು ರಕ್ಷಣೆ ಆಯೋಗದ ಸದಸ್ಯೆ ಡಾ. ಸುಚಿತ್ರಾ ಚತುರ್ವೇದಿ ಹೇಳಿದ್ದಾರೆ.

ಬಾಲಕಿಯ ತಂದೆ ಸೂರಜ್‌ಭಾನ್ ನಿಶಾದ್ ಆಕೆಯ ವಿವಾಹವನ್ನು ಉನ್ನಾವೊ ಜಿಲ್ಲೆಯ ಬಿಘಾಪುರದ ಭಾಗನಖೇಡಾ ಮಾಜ್ರೆ ದುಲಿಖೇಡಾದ ನಿವಾಸಿ 28 ವರ್ಷದ ರೋಹಿತ್ ನಿಶಾದ್‌ನೊಂದಿಗೆ ನಡೆಸಲು ನಿರ್ಧರಿಸಿದ್ದ. ಇದನ್ನು ತಿಳಿದು ಲಕ್ಷ್ಮೀ ಪ್ರತಿಭಟಿಸಿದಳು. ಯಾರೊಬ್ಬರೂ ಕೇಳದೇ ಇದ್ದಾಗ ಪೊಲೀಸ್ ಠಾಣೆ ಸಂಪರ್ಕಿಸಿದ್ದಳು.

‘‘ಸಮಾಜದಲ್ಲಿ ಈಗಲೂ ಬಾಲ್ಯ ವಿವಾಹ ನಡೆಯುತ್ತಿದೆ. ಇದನ್ನು ತಡೆಯುವ ಅಗತ್ಯ ಇದೆ. ದಿಟ್ಟ ಹೆಜ್ಜೆ ಇರಿಸಿದ ಬಾಲಕಿಗೆ ಸೆಲ್ಯೂಟ್. ಇದು ಸಮಾಜದಲ್ಲಿ ಜಾಗೃತಿ ಮೂಡಿಸಿದೆ’’ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಸುನಿತಾ ಬನ್ಸಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News