ಲಯನ್ ದೇವಾನಂದ ರಾವ್

Update: 2019-12-04 04:17 GMT

ಮುಲ್ಕಿ, ಡಿ.4: ಸುರತ್ಕಲ್ ನಿವಾಸಿ ಲಯನ್ ದೇವಾನಂದ ರಾವ್(75) ಮಂಗಳವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಇಂಡಿಯನ್ ಏರ್‌ಫೋರ್ಸ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಅವರು 1971ರಲ್ಲಿ ಇಂಡೋ-ಬಾಂಗ್ಲಾ ಯುದ್ಧದಲ್ಲೂ ಭಾಗವಹಿಸಿದ್ದ ಹೆಗ್ಗಳಿಕೆ ಹೊಂದಿದ್ದರು ಆ ಬಳಿಕ ಮಂಗಳೂರಿನ ಕೆಐಒಸಿಎಲ್‌ನಲ್ಲಿ ಉದ್ಯೋಗಿಯಾಗಿದ್ದರು. ಯಕ್ಷಗಾನ ಕಲಾವಿದರೂ ಆಗಿದ್ದ ದೇವಾನಂದ ರಾವ್ ಕಳೆದ 15 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ