ಇಂಡೋ ಟಿಬೆಟನ್ ಗಡಿ ಪೊಲೀಸ್ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ: ಆರು ಮಂದಿ ಬಲಿ

Update: 2019-12-04 06:33 GMT

ರಾಯಪುರ್, ಡಿ.4: ಛತ್ತೀಸಗಢದ ನಾರಾಯಣಪುರ್ ಜಿಲ್ಲೆಯಲ್ಲಿ ಬುಧವಾರ ಇಂಡೋ-ಟಿಬೆಟನ್ ಗಡಿ ಪೊಲೀಸರು ಪರಸ್ಪರ ಕಾದಾಡಿದ ಪರಿಣಾಮ ಉಂಟಾದ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಸಿಬ್ಬಂದಿ ಹತ್ಯೆಗೀಡಾದರಲ್ಲದೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಐಟಿಬಿಪಿ (ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್) 45ನೇ ಬೆಟಾಲಿಯನ್ ಇರುವ ಕಡೇನರ್ ಶಿಬಿರದಲ್ಲಿ ಈ ಘಟನೆ ನಡೆದಿದೆ ಎಂದು ಐಜಿಪಿ (ಬಸ್ತರ್ ವಲಯ) ಸುಂದರರಾಜ್ ತಿಳಿಸಿದ್ದಾರೆ.

ಆರಂಭಿಕ ಮಾಹಿತಿಯಂತೆ ಓರ್ವ ಐಟಿಬಿಪಿ ಜವಾನ ಮೊದಲು ತನ್ನ ಸರ್ವಿಸ್ ರೈಫಲ್‌ನಿಂದ ಸಹೋದ್ಯೋಗಿಗಳತ್ತ ಗುಂಡು ಹಾರಿಸಿ ನಾಲ್ಕು ಮಂದಿಯನ್ನು ಕೊಂದು ಮೂವರನ್ನು ಗಾಯಗೊಳಿಸಿದರೆ, ಗುಂಡು ಹಾರಿಸಿದ ಜವಾನನ್ನೂ ನಂತರ ಗುಂಡಿಕ್ಕಿ ಸಾಯಿಸಲಾಯಿತು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣಪುರ್ ಎಸ್ಪಿ ಮೋಹಿತ್ ಗರ್ಗ್ ಸ್ಥಳಕ್ಕೆ ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News