ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ: ಮೇನಕಾ ಗಾಂಧಿ

Update: 2019-12-06 08:07 GMT

 ಹೊಸದಿಲ್ಲಿ, ಡಿ.6: ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಶುಕ್ರವಾರ ಬೆಳಗ್ಗಿನ ಜಾವ ಸೈಬರಾಬಾದ್ ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ ಪ್ರಕರಣ ನಡೆದ ಕೆಲವೇ ಗಂಟೆಗಳ ಬಳಿಕ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಮೇನಕಾ ಗಾಂಧಿ,ಈ ಘಟನೆಯು ಒಂದು ಅಪಾಯಕಾರಿ ನಿದರ್ಶನವಾಗಿದೆೆ ಎಂದು ಆತಂಕ ವ್ಯಕ್ತಪಡಿಸಿದರು.

  "ನಾವು ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಅವರನ್ನು(ಆರೋಪಿಗಳು)ನ್ಯಾಯಾಲಯ ಯಾವುದೇ ರೀತಿಯಲ್ಲಾದರೂ ಗಲ್ಲು ಶಿಕ್ಷೆಗೆ ನೀಡುತ್ತಿತ್ತು. ನೀವು ಬಯಸಿದ ಕಾರಣಕ್ಕೆ ಜನರನ್ನು ಕೊಲ್ಲಲು ಸಾಧ್ಯವಿಲ್ಲ. ನ್ಯಾಯಯುತ ವಿಚಾರಣೆಗೆ ಮೊದಲೇ ಅವರನ್ನು ಗುಂಡು ಹಾರಿಸಿ ಸಾಯಿಸಲು ಬಯಸಿದರೆ ನ್ಯಾಯಾಲಯ, ಪೊಲೀಸರು ಅಥವಾ ಕಾನೂನು ವ್ಯವಸ್ಥೆ ಇರುವುದಾದರೂ ಏತಕ್ಕಾಗಿ?'' ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಸಂಸತ್ತಿನ ಸಂಕೀರ್ಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News