ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಆಗ್ರಹಿಸಿ ಅಪ್ರಾಪ್ತ ಪುತ್ರಿಯ ಮೇಲೆ ಪೆಟ್ರೋಲ್ ಸುರಿದ ಮಹಿಳೆ

Update: 2019-12-07 10:19 GMT

ಹೊಸದಿಲ್ಲಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಆಗ್ರಹಿಸಿ ರಾಜಧಾನಿಯ ಸಫ್ದರ್‍ ಜಂಗ್ ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಒಬ್ಬಳಾಗಿದ್ದ ಮಹಿಳೆ ಆಕ್ರೋಶದಿಂದ ತನ್ನ ಆರು ವರ್ಷದ ಪುತ್ರಿಯ ಮೈಮೇಲೆ ಪೆಟ್ರೋಲ್ ಸುರಿದ ಘಟನೆ ಶನಿವಾರ ನಡೆದಿದೆ.

ಮಹಿಳೆಯನ್ನು ತಕ್ಷಣ ವಶಪಡಿಸಿಕೊಂಡ ಪೊಲೀಸರು ಆಕೆಯ ಪುತ್ರಿಯನ್ನು ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್‍ ಗೆ ದಾಖಲಿಸಿದ್ದಾರೆ.

ಕಳೆದ ರಾತ್ರಿ ಮೃತಪಟ್ಟ ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮೃತದೇಹವನ್ನು ಆಕೆಯ ಕುಟುಂಬ ಸ್ವಗ್ರಾಮಕ್ಕೆ ಕೊಂಡು ಹೋದ ಒಂದು ಗಂಟೆಯ ನಂತರ ಈ ಘಟನೆ ನಡೆದಿತ್ತು.

ಕೆಲ ಸಮಯದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಆಕೆ  ಗುರುವಾರ ಬೆಳಿಗ್ಗೆ ಕೋರ್ಟ್ ವಿಚಾರಣೆಗೆ ಹಾಜರಾಗಲು ತೆರಳುತ್ತಿದ್ದಾಗ ಐದು ಮಂದಿ ಆಕೆಗೆ ಬೆಂಕಿ ಹಚ್ಚಿದ್ದರು.  ಆಕೆಯನ್ನು  ಅಲ್ಲಿನ ಆಸ್ಪತ್ರೆಗೆ ಮೊದಲು ದಾಖಲಿಸಲಾಗಿದ್ದರೂ ನಂತರ ಸಫ್ದರ್‍ಜಂಗ್ ಆಸ್ಪತ್ರೆಗೆ ವಿಮಾನ ಮೂಲಕ ಸಾಗಿಸಿ ದಾಖಲಿಸಲಾಗಿತ್ತು. ಶೇ 90ರಷ್ಟು ಸುಟ್ಟ ಗಾಯಗಳುಂಟಾಗಿದ್ದ ಆಕೆ ಕಳೆದ ರಾತ್ರಿ ಮೃತಪಟ್ಟಳು. ಆರೋಪಿಗಳ ಪೈಕಿ ಇಬ್ಬರು ಆಕೆಯ ಮೇಲೆ ಅತ್ಯಾಚಾರಗೈದವರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News