ಏಳರ ಬಾಲೆ ಮೇಲೆ ಅತ್ಯಾಚಾರ: ಸಾರ್ವಜನಿಕರಿಂದ ಆರೋಪಿಗೆ ಥಳಿತ

Update: 2019-12-09 02:51 GMT

ನಾಸಿಕ್: ಏಳು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ನೆರೆಮನೆಯ 27 ವರ್ಷದ ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ರವಿವಾರ ನಡೆದಿದೆ.

ನಾಸಿಕ್‌ನ ಅಂಬದ್ ಪ್ರದೇಶದ ನಿವಾಸಿ ಕೈಲಾಸ್ ಕೊಕನಿಯನ್ನು ಉದ್ರಿಕ್ತ ಸಾರ್ವಜನಿಕರು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು. ಪುಟ್ಟ ಬಾಲಕಿಯನ್ನು ಆಟವಾಡಲು ಮನೆಗೆ ಕರೆದು ಟಿವಿಯಲ್ಲಿ ಕಾರ್ಟೂನ್ ತೋರಿಸಿ ಬಳಿಕ ಅತ್ಯಾಚಾರ ಎಸಗಿದ ಎಂದು ಆರೋಪಿಸಲಾಗಿದೆ.

ಈ ಬಾಲಕಿಯ ಕುಟುಂಬ ಇತ್ತೀಚೆಗೆ ಆ ಪ್ರದೇಶಕ್ಕೆ ಬಂದಿತ್ತು. "ಬಾಲಕಿಯ ತಾಯಿ ಮಗಳಿಗಾಗಿ ಹುಡುಕಾಟ ಆರಂಭಿಸಿ, ಚಲನ ವಲನಗಳ ಬಗ್ಗೆ ಮಾಹಿತಿ ಇದೆಯೇ ಎಂದು ಕೇಳಲು ಕೊಕನಿ ಮನೆ ಬಾಗಿಲು ಬಡಿದರು. ಬಾಗಿಲು ತೆರೆಯದಿದ್ದಾಗ ನೆರೆಮನೆಯವರು ಬಲವಂತವಾಗಿ ಬಾಗಿಲು ತೆರೆಸಿದರು. ಈ ವೇಳೆ ಬಾಲಕಿ ಒಳಗೆ ಪತ್ತೆಯಾದಳು ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಅಂಬದ್ ಪೊಲೀಸರಿಗೆ ಒಪ್ಪಿಸಿದರು. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News