ಗ್ರಾಹಕರ ಗಮನಕ್ಕೆ: ಡಿ. 31ರಿಂದ ನಿಷ್ಕ್ರಿಯಗೊಳ್ಳಲಿದೆ ಎಸ್ ಬಿಐನ ಈ ಕಾರ್ಡ್ ಗಳು

Update: 2019-12-09 12:18 GMT

ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮಲ್ಲಿ ಈಗ ಇರುವ 'ಮ್ಯಾಗ್ ಸ್ಟ್ರೈಪ್' ಅಥವಾ 'ಮ್ಯಾಗ್ನೆಟಿಕ್ ಸ್ಟ್ರೈಪ್'  ಡೆಬಿಟ್ ಕಾರ್ಡುಗಳ ಬದಲು ಹೊಸ ಇಎಂವಿ (ಯುರೋಪೇ, ಮಾಸ್ಟರ್ ಕಾರ್ಡ್, ವೀಸಾ) ಚಿಪ್ ಮತ್ತು ಪಿನ್ ಆಧರಿತ ಕಾರ್ಡ್ ಪಡೆಯಲು ಡಿಸೆಂಬರ್ 31ರೊಳಗಾಗಿ  ತಮ್ಮ ಖಾತೆಯಿರುವ ಶಾಖೆಗಳಿಗೆ ಅರ್ಜಿ ಸಲ್ಲಿಸಬೇಕಿದೆ

ಡಿಸೆಂಬರ್ 31ರೊಳಗೆ ಹೊಸ ಕಾರ್ಡುಗಳನ್ನು ಪಡೆಯದ ಗ್ರಾಹಕರ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡುಗಳನ್ನು ಡಿ-ಆಕ್ಟಿವೇಟ್ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದೆ.

ಮ್ಯಾಗ್ನಟಿಕ್ ಸ್ಟ್ರೈಪ್ ಕಾರ್ಡುಗಳ ಬದಲು ಗ್ರಾಹಕರಿಗೆ ಇಎಂವಿ ಚಿಪ್ ಹಾಗೂ ಪಿನ್ ಆಧರಿತ ಕಾರ್ಡ್‍ಗಳನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿತ್ತು.

ಇಎಂವಿ ಚಿಪ್ ಕಾರ್ಡ್‍ಗಳನ್ನು ಹೊಂದದ ಗ್ರಾಹಕರು ತಕ್ಷಣ ತಮ್ಮ ಶಾಖೆಗೆ ತೆರಳಿ ಅರ್ಜಿ ಸಲ್ಲಿಸುವಂತೆಯೂ ಬ್ಯಾಂಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News