ಕಿಮ್ಸ್ ನಿರ್ದೇಶಕರಾಗಿ ಡಾ.ರಾಮಲಿಂಗಪ್ಪ ಆಯ್ಕೆ

Update: 2019-12-09 17:18 GMT

ಹುಬ್ಬಳ್ಳಿ, ಡಿ.9: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯ ನಾಲ್ಕು ವರ್ಷಗಳ ಅವಧಿಗೆ ಖಾಯಂ ನಿರ್ದೇಶಕರಾಗಿ ಡಾ.ರಾಮಲಿಂಗಪ್ಪ ಅಂಟರತಾನಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಪ್ರಭಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಮಲಿಂಗಪ್ಪ ಇಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಖಾಯಂ ನಿರ್ದೇಶಕರಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ನಿರ್ದೇಶಕ ಹುದ್ದೆಗೆ ಹಲವರು ಲಾಬಿ ನಡೆಸಿದ್ದರು. ಆದರೆ, ಈ ಹುದ್ದೆಗೆ ಡಾ.ರಾಮಲಿಂಗಪ್ಪ ಆಯ್ಕೆಯಾಗುವ ಮೂಲಕ ಬಹು ನಿರೀಕ್ಷಿತ ನಿರ್ದೇಶಕರ ಹುದ್ದೆಯ ಕುತೂಹಲಕ್ಕೆ ತೆರೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News