ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ನೀಡಿ: ನಟಿ ವಹೀದಾ ರಹಿಮಾನ್

Update: 2019-12-09 17:50 GMT

ಮುಂಬೈ, ಡಿ. 5: ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿರಿಯ ನಟಿ ವಹಿದಾ ರಹೀಮಾನ್, ಅತ್ಯಾಚಾರ ಭಯಾನಕ ಹಾಗೂ ಕ್ಷಮಿಸಲಾಗದ ಅಪರಾಧ. ಆದರೆ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕೇ ಹೊರತು ಮರಣ ದಂಡನೆಯಲ್ಲ ಎಂದಿದ್ದಾರೆ.
ಪಶವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ನಡೆಸಿರುವ ಬಗ್ಗೆ ರವಿವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅತ್ಯಾಚಾರದಂತಹ ಅಪರಾಧಗಳು ಕ್ಷಮಾರ್ಹವಲ್ಲ. ಆದರೆ, ಕೆಲವರನ್ನು ಹತ್ಯೆಗೈಯಲು ನಾವು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಅತ್ಯಾಚಾರಿಗಳಿಗೆ ಜೀವಾಧಿ ಶಿಕ್ಷೆ ನೀಡಬೇಕು. ಜೀವನ ಪೂರ್ತಿ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು ಎಂದರು.
 ಇಲ್ಲಿ ಛಾಯಾಚಿತ್ರ ಪ್ರದರ್ಶನದ ಕಾರ್ಯಕ್ರಮದಲ್ಲಿ ಸಂಗೀತಗಾರ ರೂಪಕುಮಾರ್ ರಾಥೋಡ್‌ನ ಮೊದಲ ಪುಸ್ತಕ ‘ವೈಲ್ಡ್ ವಾಯೇಜ್’ ಬಿಡುಗಡೆ ಮಾಡಿ ಅವರು ಮಾತನಾಡಿದರು.
 ಈ ಸಂದರ್ಭ ಮಾತನಾಡಿದ ಚಿತ್ರ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಇಂತಹದ್ದು ಸಂಭವಿಸಿರುವುದಕ್ಕೆ ನಾಗರಿಕರ ನೆಲೆಯಲ್ಲಿ ಸಂಪೂರ್ಣ ಸಮಾಜ, ಕಾನೂನು ಪಾಲಕರು ಹಾಗೂ ನಾವೆಲ್ಲರೂ ಅವಮಾನದಿಂದ ತಲೆತಗ್ಗಿಸಬೇಕಾದ ಸಮಯ. ನಾಗರಿಕ ಸಮಾಜದಲ್ಲಿ ಮರಣದಂಡನೆಯನ್ನು ನ್ಯಾಯಾಲಯ ನೀಡಬೇಕು ಹೊರತು ನಾವು ನೀಡಬಾರದು ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News