ಲಂಕಾದ ವೇಗದ ಬೌಲರ್ ಸುರಂಗ ಲಕ್ಮಲ್‌ಗೆ ಡೆಂಗ್: ಪಾಕಿಸ್ತಾನ ಪ್ರವಾಸದಿಂದ ಹೊರಕ್ಕೆ

Update: 2019-12-10 07:57 GMT

ಕೊಲಂಬೊ, ಡಿ.9: ಶ್ರೀಲಂಕಾದ ವೇಗದ ಬೌಲರ್ ಸುರಂಗ ಲಕ್ಮಲ್ ಡೆಂಗ್ ಜ್ವರದಿಂದಾಗಿ ಪಾಕಿಸ್ತಾನ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅಸಿತಾ ಫೆರ್ನಾಂಡೊ ಅವರು ಲಕ್ಮಲ್ ಬದಲಿಗೆ ಆಡಲಿದ್ದಾರೆ. 22ರ ಹರೆಯದ ಫೆರ್ನಾಂಡೊ ಎರಡನೇ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ರವಿವಾರ ಘೋಷಿಸಿದೆ.

 ಲಕ್ಮಲ್ 15 ಸದಸ್ಯರುಗಳನ್ನು ಒಳಗೊಂಡ ಶ್ರೀಲಂಕಾ ತಂಡದಲ್ಲಿ ಆರಂಭದಲ್ಲಿ ಸ್ಥಾನ ಪಡೆದಿದ್ದರು. 2009ರ ಮಾರ್ಚ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಲಾಹೋರ್‌ನಲ್ಲಿ ಉಗ್ರಗಾಮಿಗಳು ದಾಳಿ ನಡೆಸಿದ 10 ವರ್ಷಗಳ ಬಳಿಕ ಪಾಕಿಸ್ತಾನ ಮೊದಲ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಕೊಂಡಿದೆ.

ಫೆರ್ನಾಂಡೊ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಷ್ಟೇ ಪಾದಾರ್ಪಣೆ ಮಾಡಬೇಕಾಗಿದೆ. ಪ್ರಸ್ತುತ ಫೆರ್ನಾಂಡೊ ನೇಪಾಳದಲ್ಲಿ ನಡೆಯುತ್ತಿರುವ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಆಡುತ್ತಿರುವ ಶ್ರೀಲಂಕಾ ತಂಡದ ಭಾಗವಾಗಿದ್ದಾರೆ.

 ತಂಡದ ಆಡಳಿತ ಮಾಜಿ ನಾಯಕ ದಿನೇಶ್ ಚಾಂಡಿಮಾಲ್‌ಗೆ ಮತ್ತೊಂದು ಅವಕಾಶ ಕಲ್ಪಿಸಿದ್ದು, ಡಿಮುತ್ ಕರುಣರತ್ನೆ ಈ ಬಾರಿ ನಾಯಕತ್ವವಹಿಸಿಕೊಂಡಿದ್ದಾರೆ. 30 ರ ಹರೆಯದ ಕರುಣರತ್ನೆ ಫೆಬ್ರವರಿಯಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆಗಸ್ಟ್‌ನಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದರು. ಬೌದ್ಧಬಿಕ್ಕುಗಳಿಂದ ರವಿವಾರ ಆಶೀರ್ವಾದ ಪಡೆದ 15 ಸದಸ್ಯರುಗಳನ್ನು ಒಳಗೊಂಡ ಶ್ರೀಲಂಕಾ ತಂಡ ಕೊಲಂಬೊದಲ್ಲಿರುವ ಮುಖ್ಯ ಕಚೇರಿಯಿಂದ ಪಾಕಿಸ್ತಾನಕ್ಕೆ ನಿರ್ಗಮಿಸಿದರು.

ಅನನುಭವಿ ಆಟಗಾರರಿದ್ದ ಶ್ರೀಲಂಕಾ ತಂಡ ಅಕ್ಟೋಬರ್‌ನಲ್ಲಿ ಸೀಮಿತ ಓವರ್ ಕ್ರಿಕೆಟ್ ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ತೆರಳಿತ್ತು. ಅಲ್ಲಿ ಅವರು ಏಕದಿನ ಸರಣಿಯನ್ನು ಸೋತಿದ್ದರು. ಡಿ.11ರಿಂದ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿರುವ ಶ್ರೀಲಂಕಾ ಡಿ.19ರಂದು ಕರಾಚಿಯಲ್ಲಿ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡಲಿದೆ.

ಶ್ರೀಲಂಕಾ ಕ್ರಿಕೆಟ್ ತಂಡ

► ಡಿಮುತ್ ಕರುಣರತ್ನೆ(ನಾಯಕ), ಒಶಾಡ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಕುಸಾಲ್ ಪೆರೇರ, ಲಹಿರು ತಿರಿಮನ್ನೆ, ಧನಂಜಯ ಡಿಸಿಲ್ವಾ, ನಿರೊಶನ್ ಡಿಕ್ವೆಲ್ಲಾ, ದಿಲ್ರುವಾಲ್ ಪೆರೇರ, ಲಸಿತ್ ಎಂಬುಲ್‌ಡೆನಿಯ, ಲಹಿರು ಕುಮಾರ, ವಿಶ್ವ ಫೆರ್ನಾಂಡೊ, ಕಸುನ್ ರಜಿತಾ ಹಾಗೂ ಲಕ್ಷ್ಮಣ್ ಸಂಡಕನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News