ಕವಿ ಡಾ.ಶರಣಪ್ಪ ಗಬ್ಬೂರ್ ಗೆ ಅಂಬೇಡ್ಕರ್ ನ್ಯಾಷನಲ್ ಫೆಲೋಷಿಪ್ ಅವಾರ್ಡ್ ಪ್ರಧಾನ

Update: 2019-12-10 18:46 GMT

ಕೋಲಾರ, ಡಿ.10: ನಗರದ ಕವಿ ಡಾ. ಶರಣಪ್ಪ ಗಬ್ಬೂರ್ ಅವರಿಗೆ ಶೈಕ್ಷಣಿಕ ಮತ್ತು ಸಾಹಿತ್ಯ ಸಾಧನೆಗಾಗಿ ನವದೆಹಲಿಯಲ್ಲಿ ಡಿ.8 ರಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಷಿಪ್ ಅವಾರ್ಡ್‍ನ್ನು ಪ್ರಧಾನ ಮಾಡಲಾಯಿತು.   

ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಸೋಹಾನ್ ಪಾಲ್, ಕಾರ್ಯದರ್ಶಿ ಸುನ್ ಶಂಕರ್, ಸಂಯೋಜನಾಧಿಕಾರಿ ಸುಮನಾಕ್ಷರ, ರಾಜ್ಯಸಭಾ ಉಪಸಭಾಪತಿ ಡಾ.ಸತ್ಯನಾರಾಯಣ ಝಟಿಯಾ ಹಾಗೂ ಇನ್ನೀತರ ಗಣ್ಯರಿಂದ ನವದೆಹಲಿಯ ಪಂಚಶೀಲ ಆಶ್ರಯದಲ್ಲಿ ಅವಾರ್ಡ್‍ನ್ನು ಪ್ರಧಾನ ಮಾಡಲಾಯಿತು. 

ಶರಣಪ್ಪನವರು ಈಗಾಗಲೇ ಕವಿಯಾಗಿ ಗುರುತಿಸಿಕೊಂಡಿದ್ದು ಸಾಂಸ್ಕೃತಿಕ ಪ್ರತಿನಿಧಿಯಾಗಿ ಕವನ, ಲೇಖನ, ವಿಮರ್ಶೆ, ಸಂಶೋಧನೆ, ಸಂಘಟನೆ, ಹಾಡುಗಾರಿಕೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ರಾಜ್ಯ ಸ್ವಾಮಿವಿವೇಕಾನಂದ ಯುವ ಪ್ರಶಸ್ತಿ’ ‘ಜಿಲ್ಲಾ ಯುವ ಪ್ರಶಸ್ತಿ’ ‘ಜಿಲ್ಲಾ ರಾಜ್ಯೋತ್ಸವ’ ಹಾಗೂ ಸಂಕ್ರಮಣ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವುದು ಅವರ ಸಾಧನೆಯನ್ನು ಎತ್ತಿ ತೋರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News