ಪಬ್‍ಜಿ ಆಡುವುದರಲ್ಲಿ ಮಗ್ನನಾಗಿದ್ದ ಯುವಕ ನೀರಿನ ಬದಲು ರಾಸಾಯನಿಕ ಸೇವಿಸಿ ಸಾವು

Update: 2019-12-11 14:46 GMT
Photo: telegraph.co.uk

ಆಗ್ರಾ: ರೈಲಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ತನ್ನ ಮೊಬೈಲ್ ಫೋನ್‍ನಲ್ಲಿ 'ಪಬ್‍ಜಿ' ಆಟ ಆಡುವುದರಲ್ಲಿ ಮಗ್ನನಾಗಿದ್ದ 20 ವರ್ಷದ ಯುವಕನೊಬ್ಬ ನೀರು ಎಂದು ಅಂದುಕೊಂಡು ರಾಸಾಯನಿಕ ಸೇವಿಸಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ.

ಪಾರ್ಕಿಂಗ್ ಸಹಾಯಕನ ಕೆಲಸ ಮಾಡುತ್ತಿದ್ದ ಗ್ವಾಲಿಯರ್ ನಿವಾಸಿ ಸೌರಭ್ ಯಾದವ್ ಮೃತ ಯುವಕ. ಆತ ಗ್ವಾಲಿಯರ್ ನಿಂದ ಆಗ್ರಾಗೆ ಚಿನ್ನಾಭರಣ ಪಾಲಿಷ್ ಮಾಡುವ ಕಾಯಕದ ತನ್ನ ಸ್ನೇಹಿತ ಸಂತೋಷ್ ಶರ್ಮಾ ಜತೆ ಪ್ರಯಾಣಿಸುತ್ತಿದ್ದ. ಇಬ್ಬರೂ ತಮ್ಮ ವಸ್ತುಗಳನ್ನು ಒಂದೇ ಚೀಲದಲ್ಲಿರಿಸಿದ್ದರು. ಆ ಚೀಲದಲ್ಲಿ  ಚಿನ್ನಾಭರಣ ಪಾಲಿಷ್ ಮಾಡುವ ರಾಸಾಯನಿಕ  ಕೂಡ ಇತ್ತೆನ್ನಲಾಗಿದೆ. ಆಟವಾಡುವುದರಲ್ಲಿಯೇ ತಲ್ಲೀನನಾಗಿದ್ದ ಸೌರಭ್ ಚೀಲಕ್ಕೆ ಕೈಹಾಕಿ ನೀರಿನ ಬಾಟಲಿ ಎಂದುಕೊಂಡು ರಾಸಾಯನಿಕ ತುಂಬಿದ ಬಾಟಲಿ ತೆಗೆದು ಅದನ್ನು ಸೇವಿಸಿದ್ದ.  ಆತನ ಆರೋಗ್ಯ ಕೂಡಲೇ ಕ್ಷೀಣಿಸತೊಡಗಿ ರೈಲು ಆಗ್ರಾ ರೈಲು ನಿಲ್ದಾಣ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News