ಪೌರತ್ವ ತಿದ್ದುಪಡಿ ಮಸೂದೆ: ನ್ಯಾಯಾಂಗದ ಸ್ವಯಂಪ್ರೇರಿತ ಮಧ್ಯ ಪ್ರವೇಶಕ್ಕೆ ಎಸ್ಸೆಸ್ಸೆಫ್ ಆಗ್ರಹ

Update: 2019-12-19 05:31 GMT

ಬೆಂಗಳೂರು, ಡಿ.12: ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು. ಇಲ್ಲವಾದರೆ ರಾಷ್ಟ್ರದ ಘನವೆತ್ತ ನ್ಯಾಯಾಂಗವು ಸ್ವಯಂಪ್ರೇರಿತವಾಗಿ ಸರಕಾರದ ಈ ನಡೆಗೆ ಸಂಬಂಧಿಸಿ‌ ಮಧ್ಯಪ್ರವೇಶಿಸಬೇಕೆಂದು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ಅವರು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರದ ನಡೆಯು ವಿಭಜನಕಾರಿಯಾಗಿದೆ. ಒಂದು ನಿರ್ದಿಷ್ಟ ಧರ್ಮವನ್ನು ಹೊರಗಿಡುವುದು ಅಥವಾ ನಿಗದಿತ ಸಮುದಾಯವನ್ನು ಗುರಿಯಾಗಿಸಿ ಶಾಸನ‌ ರೂಪಿಸುವುದು ಸಂವಿಧಾನ ವಿರೋಧಿಯಾಗಿದೆ ಎಂದು ಅವರ ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯಿಸಿದ್ದಾರೆ.

ಸಂವಿಧಾನ ವಿರೋಧಿ ನಡೆಯ ವಿರುದ್ಧ ನಡೆಯುವ ಎಲ್ಲಾ ನ್ಯಾಯ ಸಮ್ಮತ ಪ್ರತಿಭಟನೆಗಳನ್ನು ಎಸ್ಸೆಸ್ಸೆಫ್ ಬೆಂಬಲಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News