'ದೇಶವಿರೋಧಿ' ಸುದ್ದಿ ಪ್ರಸಾರ ಮಾಡಬೇಡಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯ ದಿನ ಚಾನೆಲ್ ಗಳಿಗೆ ಸೂಚನೆ

Update: 2019-12-12 10:10 GMT

ಹೊಸದಿಲ್ಲಿ: ಹಿಂಸೆಗೆ ಪ್ರೇರೇಪಣೆ ನೀಡಬಹುದಾದಂತಹ ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆ ತಂದೊಡ್ಡಬಹುದಾದ  ಸುದ್ದಿಯನ್ನು ಪ್ರಸಾರ ಮಾಡದೇ ಇರುವಂತೆ ಎಲ್ಲಾ ಖಾಸಗಿ ಟಿವಿ ವಾಹಿನಿಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಅಸ್ಸಾಂ, ತ್ರಿಪುರಾ ಸಹಿತ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ  ಈ ಸಲಹೆ ಬಂದಿದೆ.

ಸಚಿವಾಲಯದ ಸುತ್ತೋಲೆಯಲ್ಲಿ ಕೇಬಲ್ ಟಿವಿ ಜಾಲ (ನಿಯಂತ್ರಣ) ಕಾಯಿದೆ 1995 ಅನ್ನು ಉಲ್ಲೇಖಿಸಲಾಗಿದೆ. 'ದೇಶವಿರೋಧಿ' ಭಾವನೆಗಳನ್ನು ಮೂಡಿಸಬಹುದಾದ ಹಾಗೂ/ಅಥವಾ ದೇಶದ ಏಕತೆಗೆ ಧಕ್ಕೆ ತರಬಹುದಾದಂತಹ ಯಾವುದೇ ವಿಚಾರವನ್ನು ಪ್ರಸಾರ ಮಾಡದೇ ಇರಲು ಸಲಹೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News