ಕಳ್ಳತನ ಆರೋಪ: ಮೂವರ ಬಂಧನ; ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಗಳು ಜಪ್ತಿ

Update: 2019-12-12 11:29 GMT

ಶಿವಮೊಗ್ಗ, ಡಿ. 12: ಮೊಬೈಲ್ ಅಂಗಡಿಯಲ್ಲಿ ಕಳವು ಮಾಡಿದ್ದ ಆರೋಪದ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಕಳವು ಮಾಡಲಾಗಿದ್ದ ಮೊಬೈಲ್‍ಗಳನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. 

ಟಿಪ್ಪುನಗರದ ನಿವಾಸಿ ಶೇಖ್ ಅರ್ಬಾಸ್ (20), ಮಹಮದ್ ಶಾಫೀಲ್ ಯಾನೆ ಹೀನಾ (19) ಹಾಗೂ ಅಣ್ಣಾನಗರದ ನಿವಾಸಿ ಮನ್ಸೂರ್ ಅಹಮದ್ ಯಾನೆ ಬಬ್ಲೂ (20) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. 

ಬಂಧಿತ ಆರೋಪಿಗಳಿಂದ 4,20,000 ರೂ. ಮೌಲ್ಯದ 27 ವಿವಿಧ ಕಂಪನಿಯ ಮೊಬೈಲ್ ಪೋನ್, 30,000 ರೂ. ಮೌಲ್ಯದ ಬಜಾಜ್ ಪ್ಲಾಟಿನಾ ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಡಿವೈಎಸ್‍ಪಿ ಉಮೇಶ್ ಈಶ್ವರ್ ನಾಯ್ಕ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ವಸಂತಕುಮಾರ್, ಪಿಎಸ್‍ಐ ಶಂಕರಮೂರ್ತಿ, ಎಎಸ್‍ಐ ವಾಚಾನಾಯ್ಕ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.  

ಕಳವು: 29/11/2019 ರಂದು ರಾತ್ರಿ ಸಮಯದಲ್ಲಿ ನಗರದ ಬಿ.ಹೆಚ್ ರಸ್ತೆಯ ಸಿ.ಕೆ.ವಿ ಟವರ್ ಕಾಂಪ್ಲೆಕ್ಸ್‍ನಲ್ಲಿರುವ ಶ್ರೀನಿಧಿ ಸೆಲ್ ಪಾಯಿಂಟ್ ಮೊಬೈಲ್ ಅಂಗಡಿಯ ಹಿಂಭಾಗದ ರೊಲಿಂಗ್ ಶೆಟರ್ ಮುರಿದು, 33,000 ನಗದು, ಮೊಬೈಲ್ ಹಾಗೂ ಮತ್ತಿತರ ವಸ್ತುಗಳನ್ನು ಇವರು ಅಪಹರಿಸಿದ್ದರು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News