ಪಿಎಂಸಿ ಬ್ಯಾಂಕ್ ಗ್ರಾಹಕರ ಕಳವಳಗಳ ಬಗ್ಗೆ ಆರ್‌ಬಿಐ ಜೊತೆ ಚರ್ಚೆ: ಮಹಾರಾಷ್ಟ್ರ ಸಚಿವ

Update: 2019-12-12 14:51 GMT

ಮುಂಬೈ,ಡಿ.12: ಮಹಾರಾಷ್ಟ್ರ ಸರಕಾರವು ಸಂಕಷ್ಟದಲ್ಲಿರುವ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕಿನ ಠೇವಣಿದಾರರ ಕಳವಳಗಳ ಬಗ್ಗೆ ಒಂದೆರಡು ದಿನಗಳಲ್ಲಿ ಆರ್‌ಬಿಐ ಜೊತೆಗೆ ಚರ್ಚಿಸಲಿದೆ ಎಂದು ರಾಜ್ಯದ ಸಚಿವ ಜಯಂತ ಪಾಟೀಲ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಪಿಎಂಸಿ ಬ್ಯಾಂಕನ್ನು ಮಹಾರಾಷ್ಟ್ರ ರಾಜ್ಯ ಸಹಕಾರಿ (ಎಂಎಸ್‌ಸಿ) ಬ್ಯಾಂಕಿನೊಂದಿಗೆ ವಿಲೀನಗೊಳಿಸಬೇಕೆಂದು ಈ ಹಿಂದೆ ಸಲಹೆ ನೀಡಿದ್ದ ಪಾಟೀಲ್,ಪಿಎಂಸಿ ಬಹುರಾಜ್ಯಗಳಲ್ಲಿ ಕಾರ್ಯಾಚರಣೆ ಹೊಂದಿದ್ದರೆ ಎಂಎಸ್‌ಸಿ ಒಂದು ರಾಜ್ಯಕ್ಕೆ ಸೀಮಿತವಾಗಿದೆ. ಹೀಗಾಗಿ ಕಾನೂನಿನ್ವಯ ಉಭಯ ಬ್ಯಾಂಕುಗಳನ್ನು ವಿಲೀನಗೊಳಿಸುವುದು ಸಾಧ್ಯವಿಲ್ಲ ಎಂದು ತನಗೆ ಮಾಹಿತಿ ನೀಡಲಾಗಿದೆ ಎಂದರು.

 ಇಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ 79ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಾಟೀಲ್,ಪಿಎಂಸಿ ಬ್ಯಾಂಕನ್ನು ಇತರ ಯಾವುದಾದರೂ ಒಳ್ಳೆಯ ಬ್ಯಾಂಕಿನೊಂದಿಗೆ ವಿಲೀನಗೊಳಿಸುವುದು ಠೇವಣಿದಾರರಿಗೆ ನೆರವಾಗಲು ಸೂಕ್ತ ಮಾರ್ಗವಾಗಿದೆ. ಈ ಬಗ್ಗೆ ತಾನು ಒಂದೆರಡು ದಿನಗಳಲ್ಲಿ ಹಿರಿಯ ಆರ್‌ಬಿಐ ಅಧಿಕಾರಿಗಳ ಜೊತೆ ಮಾತನಾಡಲಿದ್ದೇನೆ. ಪಿಎಂಸಿ ಬ್ಯಾಂಕ್ ಠೇವಣಿದಾರರ ಬಗ್ಗೆ ಮಹಾರಾಷ್ಟ್ರ ಸರಕಾರಕ್ಕೆ ಸಹಾನುಭೂತಿಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News