ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Update: 2019-12-12 15:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.12: ಜೆಇಇ ಪರೀಕ್ಷೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿದ್ದು, ಪರೀಕ್ಷೆಗಳು 2020ರ ಜ.13 ರಿಂದ 25 ರವರೆಗೆ ನಡೆಯಲಿದೆ.

ಈ ಹಿಂದೆ ಜ.9 ರಿಂದ ಜ.24ರವರೆಗೆ ಪರೀಕ್ಷೆಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ಜ.6 ರಿಂದ ಜ.11 ರವರೆಗೆ ಜೆಇಇ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ, ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿ

ಜ.13: ಅರ್ಥಶಾಸ್ತ್ರ, ಭೌತಶಾಸ್ತ್ರ

ಜ.14: ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್, ಉರ್ದು, ಸಂಸ್ಕೃತ

ಜ.16: ಭೂಗೋಳಶಾಸ್ತ್ರ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ

ಜ.17: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ

ಜ.18: ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್

ಜ.20: ಬಿಜಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜ.21: ಹಿಂದಿ

ಜ.22: ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ

ಜ.23: ಇತಿಹಾಸ, ಜೀವಶಾಸ್ತ್ರ, ಸಾಮಾನ್ಯ ಗಣಿತ

ಜ.24: ಇಂಗ್ಲಿಷ್, ಮಾಹಿತಿ ತಂತ್ರಜ್ಞಾನ

ಜ.25: ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News