ಸಿಐಟಿಯು ನಾಯಕರ ಮೇಲೆ ಹೂಡಿರುವ ಸುಳ್ಳು ಆರೋಪ ತೆಗೆದು ಹಾಕಬೇಕು: ಎಸ್.ವರಲಕ್ಷ್ಮಿ

Update: 2019-12-12 17:19 GMT

ಬೆಂಗಳೂರು, ಡಿ.12: ಅಂಗನವಾಡಿ ನೌಕರರು ನ್ಯಾಯಯುತ ಬೇಡಿಕೆಗಳಿಗೆ ಒತ್ತಾಯಿಸಿ ಡಿ.10ರಿಂದ ತುಮಕೂರಿನಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ರಾಜ್ಯ ಸರಕಾರ ತಡೆಯೊಡ್ಡುವುದರ ಜತೆ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿಐಟಿಯು ಪದಾಧಿಕಾರಿಗಳ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಲಾಗಿದೆ ಎಂದು ಸಂಘಟನೆಯ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ ಆರೋಪಿಸಿದ್ದಾರೆ.

ಗುರುವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಟಿಯು ಹಮ್ಮಿಕೊಂಡಿದ್ದ ಈ ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಆದೇಶವು ಅಕ್ರಮ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.

ಈ ಆದೇಶವನ್ನು ಕೂಡಲೇ ರಾಜ್ಯ ಸರಕಾರ ಹಿಂಪಡೆಯಬೇಕು. ಇಂತಹ ಪ್ರತಿಬಂಧಕಾಜ್ಞೆಯನ್ನು ಯಾವುದೇ ಹೋರಾಟಗಾರರ ಮೇಲೆ ಹೇರಬಾರದು ಹಾಗೂ ಸಿಐಟಿಯು ನಾಯಕರ ಮೇಲೆ ಹೂಡಿರುವ ಸುಳ್ಳು ಆರೋಪವನ್ನು ತೆಗೆದು ಹಾಕಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News