ಯಡಿಯೂರಪ್ಪ ಕಾಲಿಗೆ ಬಿದ್ದು ನಮಸ್ಕರಿಸಿದ ಜೆಡಿಎಸ್ ಶಾಸಕ ಸುರೇಶ್‍ ಗೌಡ

Update: 2019-12-12 17:31 GMT

ಮಂಡ್ಯ, ಡಿ.12: ನಾಗಮಂಗಲದ ಆದಿಚುಂಚನಗಿರಿಗೆ ಗುರುವಾರ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ಜೆಡಿಎಸ್ ಶಾಸಕ ಕೆ.ಸುರೇಶ್‍ಗೌಡ ನಮಸ್ಕರಿಸಿದ ಘಟನೆ ನಡೆಯಿತು.

ಯಡಿಯೂರಪ್ಪ ಅವರನ್ನು ಸ್ವಾಗತಿಸುವ ವೇಳೆ ಹಾಜರಿದ್ದ ಸುರೇಶ್‍ಗೌಡ ದಿಢೀರನೆ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಅಲ್ಲದೆ, ಕಾರ್ಯಕ್ರಮ ಮುಗಿಸಿ ಮರಳುವ ವೇಳೆಯೂ ಮತ್ತೊಮ್ಮೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಸುರೇಶ್‍ ಗೌಡ ಸಮರ್ಥನೆ: ನಂತರ, ಸುದ್ದಿಗಾರರ ಜತೆ ಮಾತನಾಡಿದ ಸುರೇಶ್‍ ಗೌಡ, ಯಡಿಯೂರಪ್ಪ ಹಿರಿಯರು, ತಂದೆ ಸಮಾನ. ಹೀಗಾಗಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೇನೆ. ಯಡಿಯೂರಪ್ಪ ಅವರ ಜಾಗದಲ್ಲಿ ಸಿದ್ದರಾಮಯ್ಯ ಬಂದಿದ್ದರೂ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ ಎಂದು ಸಮರ್ಥಿಸಿಕೊಂಡರು.

ಹಿಂದೆ ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂದಿದ್ದೆ. ಆದರೆ, ಈಗ ಅವರಿಗೆ ಯಾರ ಅವಶ್ಯಕತೆಯು ಇಲ್ಲ. ನಾನು ಜೆಡಿಎಸ್ ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ. ಜೆಡಿಎಸ್‍ನಲ್ಲಿ ನನಗೆ ಯಾವುದೇ ನೋವು ಇಲ್ಲ ಎಂದು ಅವರು ಹೇಳಿದರು.

ಇದೀಗ ಉಪಚುನಾವಣೆಯಲ್ಲಿ ಆಯ್ಕೆಯಾದ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರ ಜತೆಯೂ ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್‍ ಗೌಡ, ಚುನಾವಣೆಯಲ್ಲಿ ನಾರಾಯಣಗೌಡರ ವಿರುದ್ಧ ಪ್ರಚಾರ ನಡೆಸಿದ್ದೇನೆ ನಿಜ. ಆದರೆ, ವೈಯಕ್ತಿಕವಾಗಿ ನಾವಿಬ್ಬರೂ ಸ್ನೇಹಿತರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News