ಬಿವಿಟಿ: ಉಚಿತ ವಸ್ತ್ರ ವಿನ್ಯಾಸ ತರಬೇತಿಗೆ ಅರ್ಜಿ ಆಹ್ವಾನ

Update: 2019-12-13 15:38 GMT

ಮಣಿಪಾಲ, ಡಿ.13: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಇದೇ ಡಿ.23ರಿಂದ 4 ವಾರಗಳ ಉಚಿತ ವಸ್ತ್ರ ವಿನ್ಯಾಸ ತರಬೇತಿ ಹಮ್ಮಿಕೊಳ್ಳಲಾಗಿದೆ. ಸ್ವ ಉದ್ಯೋಗ ಮಾಡಲು ಆಸಕ್ತಿ ಇರುವ ಮಹಿಳೆಯರು ಹಾಗೂ ಶಾಲಾ ಕಾಲೇಜು ಕಲಿಯುತ್ತಿರುವ/ವಿದ್ಯಾಭ್ಯಾಸ ಮುಗಿಸಿರುವ ಮಹಿಳಾ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು. ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ, ಉಪಹಾರ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ವಿದ್ಯಾರ್ಹತೆಯನ್ನು ಬಿಳಿ ಹಾಳೆಯಲ್ಲಿ ಬರೆದು ಡಿ.18ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ- 576102 ಈ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿಕೊಡಬಹುದು. ಅಥವಾ ದೂರವಾಣಿ ಸಂಖ್ಯೆ: 0820-2570263 ನ್ನು ಸಂಪರ್ಕಿಸಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News