ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-12-13 18:32 GMT

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

 ಕೆಟಿಎಚ್ ಇಂಡಿಯಾ ಸ್ಕಾಲರ್‌ಶಿಪ್ 2020

 ವಿವರ: ಸ್ವೀಡನ್‌ನ ಕೆಟಿಎಚ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಸ್ವೀಡನ್‌ನ ಕೆಟಿಎಚ್ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೀಡುತ್ತಿರುವ ಸ್ಕಾಲರ್‌ಶಿಪ್. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಹತೆ: ಭಾರತದಲ್ಲಿ ಪದವಿ ಮುಗಿಸಿರುವ ವಿದ್ಯಾರ್ಥಿಗಳು (ಬೋಧನಾ ಶುಲ್ಕ ಪಾವತಿಸುವವರು), ಮೊದಲ ಆದ್ಯತೆಯಾಗಿ ಸ್ವೀಡನ್‌ನ ಕೆಟಿಎಚ್‌ನಲ್ಲಿ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿರುವವರು ಅರ್ಹರು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕ ಮನ್ನಾ ಹಾಗೂ 10 ತಿಂಗಳು ಜೀವನ ಭತ್ತೆ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 15, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/KIS2

**********

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಜೆಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಶಿಪ್

ವಿವರ: ವಿದೇಶದಲ್ಲಿ ಉನ್ನತ ಅಧ್ಯಯನ ನಡೆಸಬಯಸುವ ವಿದ್ಯಾರ್ಥಿಗಳಿಂದ ಜೆಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ಪ್ರಯಾಣ ನಿಧಿ, ಕೊಡುಗೆ ಪುರಸ್ಕಾರ ನೀಡಲಾಗುವುದು. ಈಗಾಗಲೇ ಈ ಯೋಜನೆಯಡಿ ನೆರವು ಪಡೆದವರು ಮತ್ತೊಮ್ಮೆ ಅದೇ ಕೋರ್ಸ್‌ಗೆ ಅರ್ಜಿ ಸಲ್ಲಿಸುವಂತಿಲ್ಲ.

ಅರ್ಹತೆ: ಭಾರತದಲ್ಲಿ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆ, ವಿವಿ, ಕಾಲೇಜುಗಳಲ್ಲಿ ಪದವಿ ಪೂರೈಸಿದವರು ಅಥವಾ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ವಿದೇಶದಲ್ಲಿ ದ್ವಿತೀಯ ವರ್ಷದ (2020-2021) ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಕನಿಷ್ಠ 2 ವರ್ಷದ ಕೋರ್ಸ್‌ಗೆ ಅರ್ಜಿ ಸಲ್ಲಿಸಿದವರು ಮಾತ್ರ ಅರ್ಹರು. ಈ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ. 60 ಸರಾಸರಿ ಅಂಕ ಗಳಿಸಿರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 1,00,000 ರೂ.ನಿಂದ 10,00,000 ರೂ.ವರೆಗಿನ ಲೋನ್ ಸ್ಕಾಲರ್‌ಶಿಪ್ ಒದಗಿಸಲಾಗುವುದು. ಲೋನ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಯಾಣ ನಿಧಿ ಮತ್ತು ಕೊಡುಗೆ ಪುರಸ್ಕಾರಕ್ಕೆ ಅರ್ಹರಾಗುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 9, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/JNT3

******

 ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಜಾರ್ಜ್ ಬ್ರೌನ್ ಕಾಲೇಜ್ ಫಂಡೆಡ್ ಇಎಪಿ ಸ್ಕಾಲರ್‌ಶಿಪ್ಸ್ 2020

ವಿವರ: ಶೈಕ್ಷಣಿಕ ಉದ್ದೇಶಗಳಿಗೆ ಇಂಗ್ಲಿಷ್‌ನಲ್ಲಿ ಉನ್ನತ ಅಧ್ಯಯನ ನಡೆಸಲು ಆಸಕ್ತರಿಗೆ ಕೆನಡಾದ ಜಾರ್ಜ್ ಬ್ರೌನ್ ಕಾಲೇಜು ನೀಡುವ ಸ್ಕಾಲರ್‌ಶಿಪ್.

ಅರ್ಹತೆ: ಶೈಕ್ಷಣಿಕ ಉದ್ದೇಶಗಳಿಗಾಗಿ ಇಂಗ್ಲಿಷ್‌ನಲ್ಲಿ ಉನ್ನತ ಅಧ್ಯಯನ ನಡೆಸಲು ಬಯಸುವ, ಪೂರ್ಣಾವಧಿ ಕೋರ್ಸ್ ಗೆ ನೋಂದಣಿಯಾಗಿರುವವರು ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಉದ್ದೇಶಗಳಿಗಾಗಿ ಇಂಗ್ಲಿಷ್ ಅಧ್ಯಯನದ ಕನಿಷ್ಠ 1 ಹಂತವನ್ನಾದರೂ ‘ಎ’ ಗ್ರೇಡ್‌ನಲ್ಲಿ ಪೂರ್ಣಗೊಳಿಸಿರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 1,000 ಕೆನಡಿಯನ್ ಡಾಲರ್ ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸೆಂಬರ್ 20, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/GBCE1

*************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಆಲ್ಬರ್ಟ್ ಐನ್‌ಸ್ಟೈನ್ ಇಂಟರ್‌ನ್ಯಾಷನಲ್ ಸ್ಕಾಲರ್‌ಶಿಪ್ಸ್ ಟೆಸ್ಟ್ 2019

ವಿವರ: ಅಂತರ್‌ರಾಷ್ಟ್ರೀಯ ಸಂಶೋಧನಾ ವಿದ್ಯಾರ್ಥಿಗಳಲ್ಲಿ ನಾಯಕತ್ವ ರೂಪಿಸುವ ಉದ್ದೇಶದಿಂದ ಭಾರತ ಸರಕಾರದ ಅಖಿಲ ಭಾರತ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಸಮಿತಿ ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ವೃತ್ತಿನಿರತರು ಅರ್ಜಿ ಸಲ್ಲಿಸಬಹುದು.

 ಅರ್ಹತೆ: 4ರಿಂದ 12ನೇ ತರಗತಿವರೆಗಿನ ಭಾರತೀಯ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯಾವುದೇ ವೃತ್ತಿಪರರು(ಕಾಲೇಜು ವಿದ್ಯಾಭ್ಯಾಸ ಮುಗಿಸಿರಬೇಕು) ಅರ್ಜಿ ಸಲ್ಲಿಸಬಹುದು. 28 ವರ್ಷ ಮೀರಿರಬಾರದು

ನೆರವು: ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಕ್ರಮವಾಗಿ 96,000 ರೂ., 25,000 ರೂ. ಮತ್ತು 10,000 ರೂ. ನಗದು ಬಹುಮಾನ, ಪ್ರಮಾಣಪತ್ರದೊಂದಿಗೆ ನೀಡಲಾಗುವುದು. ತರಬೇತಿ ಹಾಗೂ ಇತರ ವಿವಿಧ ಸೌಲಭ್ಯವಿರುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸೆಂಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/AEI1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News